ಜಿಲ್ಲೆ

ಧರಗೆ ದೊಡ್ಡವರು ಕಾರ್ಯಕ್ರಮ ಉದ್ಘಾಟನೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮಾಹಿತಿಯ ಆಗರ. ರಾಜ್ಯೋತ್ಸವ ಅಂಗವಾಗಿ ಸಂಘ ಆಯೋಜಿಸಿರುವ `ಧರೆಗೆ ದೊಡ್ಡವರು' ಮಾಲಿಕೆಯು ಜ್ಞಾನ, ವಿದ್ವತ್ತು ಹಾಗೂ ಸಾಹಿತ್ಯದ ಹೂರಣ. ಸಾಹಿತಿಗಳ ಬರವಣಿಗೆ, ಉಪನ್ಯಾಸ, ವಿಚಾರಧಾರೆಗಳು ಜೀವನಕ್ಕೆ ಮಾರ್ಗದರ್ಶಿ ಎಂದು ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ತಿಂಗಳ ಪರ್ಯಂತ `ಧರೆಗೆ ದೊಡ್ಡವರು' ಮಾಲಿಕೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರು ಗುರು- ಹಿರಿಯರನ್ನು ಗೌರವಿಸಬೇಕು. ಅಹಂ ತೊರೆದು ಹಿರಿಯರ ಅನುಭವದಿಂದ ಕಲಿಯಬೇಕು. ಹಿರಿಯರ ಸಾಧನೆ ಸೂರ್ತಿಯಾಗಬೇಕು ಎಂದರು.

ಡಾ. ಹಂಪನಾ ಬದುಕು ಕುರಿತು ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಡಾ. ಹಂಪನಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಅವಽಯಲ್ಲಿ ಮಾಡಿದ ಕಾರ್ಯಗಳು ಸ್ತುತ್ಯರ್ಹ. ಅವರು ಇಳಿ ವಯಸ್ಸಿನಲ್ಲೂ ಕನ್ನಡ ಕಟ್ಟುವ ಕಾರ್ಯ ಮುಂದುವರಿಸಿರುವುದು ಶ್ಲಾಘನೀಯ ಎಂದರು.

ಡಾ. ಹಂಪನಾ ಕೊಡುಗೆ ಕುರಿತು ಡಾ. ಸುಂಕಮ್ಮ ಗೋವರ್ದನ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ಸಾಹಿತಿ ಡಾ. ಎಂ.ಡಿ. ವಕ್ಕುಂದ, ವೀರಣ್ಣ ಒಡ್ಡೀನ, ಶಂಕರ ಕುಂಬಿ, ಸತೀಶ ತುರಮರಿ, ಗುರು ಹಿರೇಮಠ, ಇತರರಿದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು.