ಕಲಬುರಗಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಖರ್ಗೆ ಪೆಟ್ರೋಲ್ ಬಂಕ್ ಸಮೀಪದ ಜಯನಗರದ ಕಾಫಿಜಾ ಕೆಫೆಗೆ ಬೆಂಕಿ ತಗುಲಿ, ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ. ಎಸ್.ಆರ್.ಪ್ಲಾಜಾ ಕಟ್ಟಡದ ಮೂರನೇ ಅಂತಸ್ತಿನಲ್ಲಿರುವ ಹರ್ಷಾ ಪವಾರ, ಶ್ರೀಧರ ಪವಾರ ಅವರ ಕಾಫಿಜಾ ಕೆಫೆ ಹೊತ್ತಿ ಉರಿಯಲು ಆರಂಭಿಸುತ್ತಿದ್ದAತೆಯೇ ಜನರು ತP್ಷÀಣ ಕಟ್ಟಡದಿಂದ ಹೊರಗೆ ಓಡಿ ಬಂದಿz್ದÁರೆ. ಬೆಂಕಿಯ ಕೆನ್ನಾಲಿಗೆ P್ಷÀಣಾರ್ಧದಲ್ಲಿ ಮೂರನೇ ಅಂತಸ್ತನ್ನು ಆವರಿಸಿದ್ದು, ಒಳಗಿದ್ದ ಫ್ರಿಜ್, ಎಸಿ, ಫಿಜ್ಜಾ, ಸ್ಯಾಂಡ್‌ವಿಚ್ ಮಶೀನ್, ಬರ್ಗರ್ ಓವೋನ್, ಕೋಲ್ಡ್ ಕಾಫಿ ಮಿಕ್ಸರ್ ಸೇರಿ ಹಲವು ಸಾಮಗ್ರಿ ಬೆಂಕಿಗೆ ಆಹುತಿಯಾಗಿವೆ. ಬೆಂಕಿ ತೀವ್ರತೆ ೩ನೇ ಅಂತಸ್ತಿನಿAದ ಕೆಳ ಅಂತಸ್ತಿನವರೆಗೆ ತಲುಪಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.