ಕಲಬುರಗಿ: ಬಿಜೆಪಿ ಕಾಯ೯ಕತ೯ರ,ಮುಖಂಡರ ಮೇಲೆ ವಿನಾಕಾರಣ ಸುಳ್ಳು ಕೆಸ್,ಗಳನ್ನು ದಾಖಲಿಸಿ,ದ್ವೇಷದ ರಾಜಕಾರಣವನ್ನು ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ದ್ವೇಷದ ರಾಜಕಾರಣವನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖಗೆ೯ ಅವರ ಮಾತುಗಳಲ್ಲಿ ನಾನೇ ಎಲ್ಲ ಎಂಬ ಅಹಂ ಬಂದಿದ್ದು,ಇದು ಒಳ್ಳೆಯ ಬೆಳವಣಿಗೆ ಅಲ್ಲ.ಪ್ರತಿ ಬಾರಿ ಸಭೆಯಲ್ಲಿ,ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದು,ಒದ್ದು ಒಳಗೆ ಹಾಕಿ ಎಂದು ಪದ ಬಳಕೆ ಮಾಡುವುದು ಜನಪ್ರತಿನಿಧಿಯಾದವರಿಗೆ ಶೋಭೆ ತರುವಂತಹ ಸಂಗತಿಯಲ್ಲ ಎಂದರು.
ಕಾಂಗ್ರೆಸ್ ಸಕಾ೯ರ ಬಂದಾಗಿನಿಂದ ಪ್ರತಿ ದಿನ ಒಂದಲ್ಲಾ ಒಂದು ಸಮಸ್ಯೆ ಆಗುತ್ತಲಿವೆ.ಸಿಂದಗಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ, ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮ ಬಿಜೆಪಿ ಕಾಯ೯ಕತ೯ನ ಮೇಲಿನ ಹಲ್ಲೆ ಪ್ರಕರಣ,ಚಿತಾಪುರ ಬಿಜೆಪಿ ಮುಖಂಡ ಮೇಲೆ ವಿನಾಕಾರಣ ಸುಳ್ಳು ಕೆಸ್ ದಾಖಲೆ,ಜೇವರ್ಗಿಯಲ್ಲಿ ಸಾಯಬಣ್ಣಾ ಅವರ ಕಾಲಿಗೆ ಗುಂಡು ಹಾರಿಸಿರುವುದು, ಆಳಂದ ತಾಲೂಕಿನ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಹಲವು ಘಟನೆಗಳು ಜರುಗುತ್ತಿದ್ದು,ಸಾವ೯ಜನಿಕರಿಗೆ ಸಕಾ೯ರದಿಂದ ರಕ್ಷಣೆ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು,ಜಿಲ್ಲೆಯಲ್ಲಿ ಕಾನೂನಿನ ಭಯ ಹೋಗಿದೆ ಎಂದು ಹೇಳಿದರು.
ಸಕಾ೯ರ ಬಂದು ನೂರು ದಿನಗಳಾಗಿವೆ.ಬರೀ ಗ್ಯಾರಂಟಿಗಳ ಕಡೆಗೆ ಗಮನ ನೀಡುತ್ತಿದ್ದು,ರಾಜ್ಯದ ಅಭಿವೃದ್ಧಿ ಕಡೆಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ.ಮೇಲಾಗಿ ಇಲ್ಲಿಯವರೆಗೂ ಶಾಸಕರ ಅನುದಾನ ಸಹ ಬಿಡುಗಡೆ ಮಾಡಿಲ್ಲ.ಹೀಗಾದರೆ ಕ್ಷೇತ್ರಗಳ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ ಅವರು,ದ್ವೇಷದ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿ ಕೆಲಸಗಳಿಗೆ ಮನ್ನಣೆ ನೀಡಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಹಿಂಬಾಲಕರು ಸಕಾ೯ರ ನಮ್ಮದಿದೆ ಎಂದು ಹೇಳುವ ದಬಾ೯ರ ಮಾಡುತ್ತಿದ್ದಾರೆ. ಸಕಾ೯ರ ಯಾರದೇ ಇರಲಿ,ಕಾನೂನು ಮಾತ್ರ ಎಲ್ಲರಿಗೂ ಒಂದೆ.ಹೀಗಾಗಿ ಯಾರು ತಪ್ಪು ಮಾಡಿರತಾರೆ ಅವರಿಗೆ ಶಿಕ್ಷೆ ನೀಡಿ ನಮ್ಮ ತಕರಾರು ಏನಿಲ್ಲ ಎಂದರು.