ಕಲಬುರಗಿ: ದೋಷ ಮತ್ತು ದ್ವೇಷ ಬಿಟ್ಟರೆ ಮಾನವ ಮಹಾ ಮಾನವ ಆಗಲು, ಮಹಾ ಮಾನವ ದೇವಮಾನವನಾಗಲು ಸಾಧ್ಯ ಎಂದು ಡಿವೈಎಸ್‌ಪಿ ಬಸವೇಶ್ವರ ಹೀರಾ ಹೇಳಿದರು.
ಶ್ರೀ ಶಾಂತಪ್ಪ ಪಾಟೀಲ್ ನರಿಬೋಳ ಪ್ರತಿಷ್ಠಾನದಿಂದ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ಶಾಂತಪ್ಪ ಪಾಟೀಲ್ ನರಿಬೋಳ ಪುಣ್ಯಸ್ಮರಣೆ, ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ದೋಷ ಸಿಗದಿದ್ದಾಗ ದ್ವೇಷಿಸಲು ಆರಂಭಿಸುತ್ತೇವೆ. ಇದನ್ನು ಬಿಡಬೇಕು. ಸುತ್ತಲಿನವರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಸಜ್ಜನರ ಒಡನಾಟವಿರಬೇಕು ಎಂದರು.
ಶಾAತಶ್ರೀ ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಮಲ್ಲಿನಾಥಗೌಡ ಯಲಗೋಡ ಮಾತನಾಡಿ, ಬದುಕಿನಲ್ಲಿ ಆಸ್ತಿಗಿಂತ ನೀತಿ ಮುಖ್ಯ. ಸುಖ, ಶಾಂತಿ ಇಲ್ಲದಿದ್ದರೆ ನೂರಾರು ಕೋಟಿ ಇದ್ದರೂ ಪ್ರಯೋಜನವಿಲ್ಲ. ಪ್ರಸ್ತುತ ರಾಜಕಾರಣ ಸಮಾಜ ಸೇವೆ ಬಿಟ್ಟು, ದುಡ್ಡು ಮಾಡಲು ಸೀಮಿತವಾಗಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದರು.
ಯಾದಗಿರಿ ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಅರವಿಂದ ಗುರೂಜಿ, ಮಲ್ಲಣ್ಣಗೌಡ ಪಾಟೀಲ್, ಮರೆಪ್ಪಾ ಬಡಿಗೇರ, ರೇವಣಸಿದ್ದಪ್ಪ ಸಂಕಾಲಿ, ಆನಂದ ಪಾಟೀಲ್, ಸದಾಶಿವ ಪಾಟೀಲ್, ಶರಣಗೌಡ ಪೊಲೀಸ್ ಪಾಟೀಲ್, ರಾಘವೇಂದ್ರ ಕುಲ್ಕರ್ಣಿ, ರಾಮಚಂದ್ರ ನಾಯ್ಕೋಡಿ, ಗುರುರಾಜ ಸುಲಳ್ಳಿ, ಗುರು ಟಣಕೇದಾರ, ನಬಿ ಭೀಮರಾಯ, ಕಾಶಿರಾಯಗೌಡ ಯಲಗೊಂಡ, ಲಕ್ಷಿö್ಮÃಕಾಂತ ಸ್ವಾದಿ, ಶ್ರವಣಕುಮಾರ ನಾಯಕ, ಸಂದೀಪ ಭರಣಿ, ಭೀಮು ದೋರಿ ಇತರರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.