ಸಂಕೇಶ್ವರ: ಪಟ್ಟಣದ ಶ್ರೀ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪಪೂ ಮಹಾವಿದ್ಯಾಲಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.೯೪ರಷ್ಟು ಸಾಧನೆ ಮಾಡಿದ್ದಾರೆ
ಎಂದು ಸಂಘದ ಕಾರ್ಯಾಧ್ಯಕ್ಷ ಮಾಜಿ ಸಚಿವ ಎ.ಬಿ.ಪಾಟೀಲ ತಿಳಿಸಿದ್ದಾರೆ.
ವಿಜ್ಞಾನ ವಿಭಾಗ: ಭೂಮಿಕಾ ಶಿಂಧೆ ಶೇ.೯೬.೫ ಪ್ರಥಮ, ಜಯಂತ ಮಜಲಟ್ಟಿ ಶೇ.೯೪.೩ ದ್ವಿತೀಯ, ಸಾನಿಕಾ ಬಿರಾಂಜೆ ಶೇ.೯೩.೩೩ ತೃತೀಯ, ವಾಣಿಜ್ಯ ವಿಭಾಗ: ಪೂಜಾ ಸುತಾರ ಶೇ.೯೭.೮೩ ಪ್ರಥಮ, ಗಂಗುತಾಯಿ ಪಾಟೀಲ ಶೇ.೯೫.೩೩ ದ್ವಿತೀಯ, ಪ್ರಿಯಾಂಕಾ ಇಂಗಲೆ ಶೇ.೯೫ ತೃತೀಯ, ಕಲಾ ವಿಭಾಗ: ವೈಷ್ಣವಿ ಹೆಗಡೆ ಶೇ.೯೩.೩೩ ಪ್ರಥಮ, ದಿವ್ಯಾ ಮಗದುಮ್ಮ ಶೇ.೯೨.೬೬ ದ್ವಿತೀಯ, ಸಂಸ್ಕೃತಿ ಪೂಜಾರಿ ಶೇ.೯೧.೬೬ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ವಿನಯ ಪಾಟೀಲ, ಸಂಸ್ಥೆ ನಿರ್ದೇಶಕ ಆರ್.ಬಿ.ಪಾಟೀಲ, ಕಾರ್ಯದರ್ಶಿ ಜಿ.ಸಿ.ಕೋಟಗಿ, ಆಡಳಿತಾಧಿಕಾರಿ ಬಿ.ಎ.ಪೂಜಾರಿ, ಪ್ರಾಚಾರ್ಯ ಸರ್ವಮಂಗಳಾ ಯರಗಟ್ಟಿ, ಸಂತೋಷ ಮ್ಯಾಗಡೆಯವರ, ಇಸ್ಮಾಯಿಲ್ ಜಮಾದಾರ ಹರ್ಷ ವ್ಯಕ್ತಪಡಿಸಿದ್ದಾರೆ.