ಜಿಲ್ಲೆ

ದ್ವಿತೀಯ ಪಿಯುಸಿ ಪರೀಕ್ಷೆ,ಮೊದಲ ದಿನ 564 ವಿದ್ಯಾರ್ಥಿಗಳು ಗೈರು

ಚಿತ್ರದುರ್ಗ:ಶುಕ್ರವಾರದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು,ಮೊದಲ ದಿನ ಕನ್ನಡದ ವಿಷಯಕ್ಕೆ ನೋಂದಾ ಯಿಸಿದ್ದ 13840 ವಿದ್ಯಾರ್ಥಿಗಳ ಪೈಕಿ 13276 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಮಾ.4ರಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರ ವಿಷಯ ಪರೀಕ್ಷೆಗಳಿರುತ್ತವೆ ಎಂದು ಪಪೂ ಶಿಕ್ಷಣ ಇಲಾಖೆ ಡಿಡಿ ಆರ್.ಪುಟ್ಟಸ್ವಾಮಿ ತಿಳಿಸಿದ್ದಾರೆ.
ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಹಿ ವಿತರಿಸಿ ವಿದ್ಯಾರ್ಥಿಗಳಿಗೆ ಆಲ್‌ದಿಬೆಸ್ಟ್ ಹೇಳಲಾಯಿತು.ಮಾ ರ್ಚ್ 22ರವರೆಗೆ ನಡೆಯಲಿರುವ ಈ ಪರೀಕ್ಷೆಗೆ ಜಿಲ್ಲೆಯಲ್ಲಿ 24 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 15, 622 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಚಿತ್ರದುರ್ಗ ತಾಲೂಕಲ್ಲಿ 9 ಕೇಂದ್ರಗಳು ಹಾಗೂ 6129 ವಿದ್ಯಾರ್ಥಿಗಳು, ಚಳ್ಳಕೆರೆ 3-2917, ಹಿರಿಯೂರು 4-1893, ಹೊಸ ದುರ್ಗ 4-2172, ಮೊಳಕಾಲ್ಮೂರು 2-1027 ಹಾಗೂ ಹೊಳಲ್ಕೆರೆ ತಾಲೂಕಿನ 2 ಕೇಂದ್ರಗಳಲ್ಲಿ 1484 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ವಿದ್ಯಾರ್ಥಿಗಳು ಮೊಬೈಲ್‌ಪೋನ್ ಸೇರಿ ಯಾವುದೇ ಬಗೆಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೇಂದ್ರಗಳಿಗೆ ತೆಗೆದುಕೊಂಡು ಹೋ ಗುವಂತಿಲ್ಲ. ಪರೀಕ್ಷಾ ಅವಧಿ ಕೊಠಡಿ ಮೇಲ್ವಿಚಾರಕರು, ಸಿಬ್ಬಂದಿಗೂ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾ ರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪರೀಕ್ಷಾ ದಿನಾಂಕಗಳಂದು ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ
ಪ್ರಶ್ನೆ ಪತ್ರಿಕೆ ಬಂಡಲ್ ಮತ್ತು ಉತ್ತರ ಪತ್ರಿಕೆಗಳನ್ನು ಸಿಸಿ ಕ್ಯಾಮರಾದ ಕಣ್ಗಾವಲಿನಲ್ಲೇ ತೆರೆದು ಬಂಡಲ್ ಮಾಡಬೇಕು. ಕಟ್ಟುನಿಟ್ಟಿನ ಮಾರ್ಗಸೂಚಿಯೊಂದಿಗೆ ಈ ಬಾರಿ ಕೇಂದ್ರಗಳ ಎಲ್ಲ ಕೊಠಡಿಗಳಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಆಂತರಿಕ ಅಂಕ
ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕ ಹೊರತು ಪಡಿಸಿದ ವಿಷಯಗಳಿಗೆ 20 ಆಂತರಿಕ ಅಂಕ ಗಳನ್ನು ಮೀಸಲಿಡಲಾಗಿದೆ.
11ಅಂಕೆಗಳ ನೋಂದಣಿ ಸಂಖ್ಯೆ
ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಈ ಬಾರಿ ಹನ್ನೊಂದು ಅಂಕೆಗಳೊಂದಿಗೆ ಇರಲಿದ್ದು, ವಿದ್ಯಾರ್ಥಿ ಪಿಯುಸಿ ಉತ್ತೀರ್ಣವಾಗುವ ವರೆಗೆ ಅದೇ ಸಂಖ್ಯೆ ಮುಂದುವರಿದಿರುತ್ತದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ‌್ಯ ಎಚ್.ನಾಗರಾಜ್ ತಿಳಿಸಿದ್ದಾರೆ. ಉತ್ತರ ಪತ್ರಿಕೆ ಹಾಳೆಗಳ ಸಂಖ್ಯೆಯನ್ನು 34ರಿಂದ 28ಕ್ಕೆ ಕಡಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದಿದ್ದಾರೆ.