ಜಿಲ್ಲೆ

ದ್ವಿತೀಯ ಪಿಯು ಪರೀಕ್ಷೆ ಸುಗಮ

ಧಾರವಾಡ: 2019- 2020ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗಳು ಬುಧವಾರ ಆರಂಭಗೊಂಡವು. ಮೊದಲ ದಿನ ಜಿಲ್ಲೆಯ 38 ಕೇಂದ್ರಗಳಲ್ಲಿ ಜರುಗಿದ ಪರೀಕ್ಷೆಯಲ್ಲಿ ಎಲ್ಲೂ ಅಕ್ರಮ ನಡೆದ ವರದಿಯಾಗಿಲ್ಲ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳನ್ನು ಬಿಡಲು ಕೇಂದ್ರಗಳವರೆಗೆ ತೆರಳಿದ್ದ ಪಾಲಕರು, ತಮ್ಮ ಮಕ್ಕಳಿಗೆ ಶುಭ ಕೋರಿದರು.

ಧಾರವಾಡದಲ್ಲಿ 17, ಹುಬ್ಬಳ್ಳಿಯಲ್ಲಿ 16, ನವಲಗುಂದ ಹಾಗೂ ಕಲಘಟಗಿಯಲ್ಲಿ ತಲಾ 2 ಹಾಗೂ ಕುಂದಗೋಳದಲ್ಲಿ 1 ಸೇರಿ 38 ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದವು. ಜಿಪಿಎಸ್ ಅಳವಡಿಸಿದ್ದ ವಾಹನಗಳಲ್ಲಿ ಭಾರಿ ಭದ್ರತೆಯೊಂದಿಗೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ಸಾಗಿಸಲಾಯಿತು.

ಇತಿಹಾಸ ವಿಷಯಕ್ಕೆ 8385 ವಿದ್ಯಾರ್ಥಿಗಳ ಪೈಕಿ 8020 ಹಾಜರಾದರೆ 365 ವಿದ್ಯಾರ್ಥಿಗಳು ಗೈರಾಗಿದ್ದರು. ಭೌತಶಾಸ್ತ್ರ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 9743 ವಿದ್ಯಾರ್ಥಿಗಳ ಪೈಕಿ 9598 ಹಾಜರಾಗಿ, 145 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು ಎಂದು ಡಿಡಿಪಿಯು ಶಾರದಾ ಕಿರೇಸೂರ ‘ವಿಜಯವಾಣಿ’ಗೆ ತಿಳಿಸಿದರು.