ಜಿಲ್ಲೆ

ದ್ರುವಂತ ಆಲೂರಗೆ ಗ್ರ್ಯಾಂಡ್​ ಮಾಸ್ಟರ್ ಕಿರೀಟ

ಕಲಬುರಗಿ: ನಗರದ ಸ್ಪಾರ್ಕಲ್ ಇಂಟರ್‌ನ್ಯಾಷನಲ್ ಶಾಲೆಯ ೨ನೇ ತರಗತಿ ವಿದ್ಯಾರ್ಥಿ ದ್ರುವಂತ ರಾಜೀವ್ ಆಲೂರ ೨೦೨೩ರ ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದಾನೆ ಎಂದು ಪಾಲಕರಾದ ರಾಜೀವ್ ಮತ್ತು ಕವಿತಾ ಆಲೂರ ತಿಳಿಸಿದ್ದಾರೆ.
ಈ ಹಿಂದೆ ದ್ರುವಂತ ಐದು ವರ್ಷದೊಳಗಿನ ವಿಭಾಗದಲ್ಲಿ ೫ ನಿಮಿಷದಲ್ಲಿ ೩೧೦ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ ಪುನರಾವರ್ತನೆ ಮೂಲಕ ದಕ್ಷಿಣ ಅಂಡಮಾನ್ ಮತ್ತು ನಿಕೋಬಾರ್ ಪ್ರತಿಭೆ ಶಿವಯೋಗಿತ ಮತ್ತು ತಮಿಳುನಾಡಿನ ಪ್ರತಿಭೆ ರಿಕ್ಷಿತ್ ಅವರ ರೆಕಾರ್ಡ್ ಬ್ರೇಕ್ ಮಾಡುವುದರೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿz್ದÁನೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದ್ರುವಂತ ಸಾಧನೆ ಗಮನಿಸಿದ ಡಾ.ಶಂಕರ್ ಪ್ರತಿಷ್ಠಾನ, ಆಕಾಶವಾಣಿ ಸೇರಿ ಅನೇಕ ಸಂಘ-ಸAಸ್ಥೆಗಳು ಸತ್ಕರಿಸಿವೆ. ಪುತ್ರನ ಸಾಧನೆ ಸಂತಸ ತಂದಿದ್ದು, ವಿಶ್ವ ದಾಖಲೆ ಮುಂದಿನ ಗುರಿ. ಶಾಲೆ ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ದ್ರುವಂತ ಮೂಂಚೂಣಿಯಲ್ಲಿದ್ದಾನೆ. ಆಡಳಿತಾಧಿಕಾರಿ ಡಾ.ದಿಲನಾಜ್ ಮುಜಿಬ್, ಪ್ರಾಂಶುಪಾಲ ಭಾವಿಕಾ ಲಾಡ್ ಮತ್ತು ಶಿP್ಷÀಕರು ವಿದ್ಯಾರ್ಥಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು. ಮಂಜುಳಾ, ತಹಜೀಮ್ ಇತರರಿದ್ದರು.