ಹುಬ್ಬಳ್ಳಿ: ಯಾದಗಿರಿ ಜಿಲ್ಲೆ ಶಹಪುರ ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ದೋರನಹಳ್ಳಿ ಸಂಸ್ಥಾನ ಹಿರೇಮಠಕ್ಕೆ ಉಟಗಿ ಹಿರೇಮಠದ ಶಿವಪ್ರಸಾದ ಅವರನ್ನು ಉತ್ತರಾಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.
ಹುಬ್ಬಳ್ಳಿ ವಿದ್ಯಾನಗರದ ಶ್ರೀ ರಂಭಾಪುರೀಶ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ ಉತ್ತರಾಧಿಕಾರಿ ನಿಯುಕ್ತಿ ಸಮಾರಂಭದಲ್ಲಿ ಶ್ರೀಗಳು ಪಾಲ್ಗೊಂಡು ಆಶೀರ್ವಚನ ನೀಡಿದರು.
ದೋರನಹಳ್ಳಿ ಹಿರೇಮಠದ ಶ್ರೀ ವೀರಮಹಾಂತ ಶಿವಾಚಾರ್ಯರು ಅನಾರೋಗ್ಯದಿಂದ ಲಿಂಗೈಕ್ಯರಾದ ಪ್ರಯುಕ್ತ ಭಕ್ತರ ಸಂಕಲ್ಪಾನುಸಾರ ಅವರಿಂದ ತೆರವಾದ ಸ್ಥಾನಕ್ಕೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದ ಗುರುಕುಲದಲ್ಲಿ ಸಂಸ್ಕೃತ ಸಾಹಿತ್ಯ, ವೇದಾ ವಿದ್ಯಾ ಪ್ರವೀಣ ಮತ್ತು ಮುಕ್ತ ವಿಶ್ವವಿದ್ಯಾಲಯದಿಂದ ಬಿಕಾಂ. ಅಧ್ಯಯನಗೈದ ಸತ್ಕುಲ ಪ್ರಸೂತ ಶಿವಪ್ರಕಾಶ ಎಂಬ ವಟುವನ್ನು ನಿಯುಕ್ತಿಗೊಳಿಸಿ ಆದೇಶ ಪತ್ರವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಅನುಗ್ರಹಿಸಿದರು.
ಬರಲಿರುವ ಮಾಘ ಮಾಸದಲ್ಲಿ ಶ್ರೀ ಮಠದ ಜಾತ್ರಾ ಪೂರ್ವ ಸಮಾರಂಭದಲ್ಲಿ ನೂತನ ಶ್ರೀಗಳಿಗೆ ಶ್ರೀ ಷ. ಬ್ರ. ರೇಣುಕ ವೀರ ಮಹಾಂತೇಶ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿದಾನದಿಂದ ಪಟ್ಟಾಧಿಕಾರ ನೆರವೇರಿಸಲಾಗುವುದೆಂದರು.
APPOINTED SUCCESSOR, TO DOORANALLI, SANSTHANA,