ಚಾಮರಾಜನಗರ: ದೊಶಿಸ್ ಚಾರಿಟಬಲ್ ಫೌಂಡೇಶನ್ ನ 2025 ನೇ ವರ್ಷದ ಕ್ಯಾಲೆಂಡರ್ ನ್ನು ತಿ.ನರಸೀಪುರ ತಾಲೂಕು ಕೊಳತ್ತೂರು ಬೌದ್ದ ವಿಹಾರ ದ ಸುಗತಪಾಲ ಬಂತೇಜಿ ಬಿಡುಗಡೆ ಮಾಡಿದರು.
ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಬುದ್ದವಂದನೆ ಸಲ್ಲಿಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಬಂತೇಜಿ ಮಾತನಾಡಿ, ಈ ಕ್ಯಾಲೆಂಡರ್ ಬುದ್ದ, ಬಸವ, ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆ ಸೇರಿದಂತೆ ಇತರ ಮಹನೀಯರು ಭಾವಚಿತ್ರವನ್ನೊಳಗೊಂಡಿದ್ದು, ಉತ್ತಮ ವಿನ್ಯಾಸದಿಂದ ಮೂಡಿಬಂದಿದ್ದು ತುಂಬಾ ಸುಂದರ ವಾಗಿದೆ ಎಂದರು.
ನಮ್ಮ ಆಚರಣೆಗಳೇ ಬಡತನಕ್ಕೆ ಮೂಲ ಕಾರಣ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ವರ್ಷದಲ್ಲಿ 10,15 ಹಬ್ಬಗಳ ಆಚರಣೆ ಮಾಡಿ ದುಂದುವೆಚ್ಚ ಮಾಡುವುದರಿಂದ ಬಡತನಕ್ಕೆ ಮೂಲ ಕಾರಣವಾಗಿದೆ. ಆಗಾಗಿ ಪ್ರತಿಯೊಬ್ಬರು ಸರಳ ಜೀವನ ಅನುಸರಿಸಬೇಕು. ಸೂರ್ಯ ಹುಟ್ಟದಿದ್ದರೆ ರಾತ್ರಿ, ಹಗಲು ಗೊತ್ತಾಗುವುದಿಲ್ಲ. ಕ್ಯಾಲೆಂಡರ್ ನ ಮಹತ್ವ ಏನೆಂದರೆ ಇವತ್ತು, ನಾಳೆಯ ಪ್ರಜ್ಞೆ ಮೂಡಿಸುತ್ತದೆ. ಕ್ಯಾಲೆಂಡರ್ ಸಮಯದ ಎಣಿಕೆಯನ್ನು ಇರಿಸಿಕೊಳ್ಳಲು, ದಿನಾಂಕಗಳೊಂದಿಗೆ ದಿನಗಳ ಸಂಬಂಧವನ್ನು ನಿರ್ಮಿಸುವ ಸಾಧನವಾಗಿದೆ ಎಂದರು
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಖಜಾಂಚಿ ಸೋಮಣ್ಣ, ಉಪಾಸಕರು ಮ್ಯಾನೇಜಿಂಗ್ ಟ್ರಸ್ಟಿ ಭಾನುಪ್ರಕಾಶ್ .ಎಸ್, ಕೃಷ್ಣಮೂರ್ತಿ, ಸತೀಶ್, ಅನಿಲ್ ಕುಮಾರ್, ಶಿವು, ಪ್ರಕಾಶ್ ಹೊಲೆಯರ್, ಮುರುಗೇಶ್, ಸೋಲಾರ್ ಶಿವು, ಯಶೋಧರ, ರಮೇಶ್, ಶಿವಮ್ಮ, ಎಂ.ಎನ್.ಸಂಪತ್ ಕುಮಾರ್ ಹಾಜರಿದ್ದರು.