ಕೊಳ್ಳೇಗಾಲ: ಪಟ್ಟಣದ ಎಂಡಿಸಿಸಿ ಬ್ಯಾಂಕ್‌ನಲ್ಲಿ ದೊಡ್ಡಿಂದುವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ 60 ರೈತರಿಗೆ 43.11 ಲಕ್ಷ ರೂ. ಸಾಲವನ್ನು ಗುರುವಾರ ಮೈಸೂರು ಮತ್ತು ಚಾ.ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ, ಮಾಜಿ ಶಾಸಕ ನರೇಂದ್ರ ವಿತರಿಸಿದರು.
2023-24ನೇ ಸಾಲಿನಲ್ಲಿ ದೊಡ್ಡಿಂದುವಾಡಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ಈ ಸಾಲ ನೀಡಲಾಗುತ್ತಿದ್ದು, ಸಾಲದ ಹಣ ನೇರವಾಗಿ ಖಾತೆಗೆ ಬರುವುದರಿಂದ ಸಾಲ ಪಡೆಯಲು ಎಟಿಎಂ ಕಾರ್ಡ್ ನೀಡಿದ್ದೇವೆ ಎಂದರು.
ದೊಡ್ಡಿಂದುವಾಡಿ, ಚಿಕ್ಕ ಇಂದ್ವಾಡಿ, ಕರಿಯನಪುರ, ಸಿಂಗನಲ್ಲೂರು, ಇಕಡಹಳ್ಳಿ, ಮತ್ತೀಪುರ, ಮೊಳಗನಕಟ್ಟೆ ರೈತರು ಫಲಾನುಭವಿಗಳಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ದೊಡ್ಡಿಂದುವಾಡಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಮಾದೇಶ್, ಉಪಾಧ್ಯಕ್ಷ ಸುರೇಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ, ಎಂಡಿಸಿಸಿ ಬ್ಯಾಂಕ್ ಮ್ಯಾನೇಜರ್ ಪ್ರವೀಣ್, ಇಕ್ಕಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶರತ್, ದೊಡ್ಡಿಂದುವಾಡಿ ಗ್ರಾಪಂ ಸದಸ್ಯ ರಾಚಪ್ಪಾಜಿ ಮತ್ತಿತರಿದ್ದರು.