ಜಿಲ್ಲೆ

ದೊಡ್ಡಕೆರೆಯಲ್ಲಿ ಯುವತಿ ಶವ ಪತ್ತೆ

ಕುಣಿಗಲ್​: ಪಟ್ಟಣದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿಯ ಸಾಪ್​ ್ಟವೇರ್​ ಉದ್ಯೋಗಿ ಸುಮಾ (25) ಮತದೇಹ ಶುಕ್ರವಾರ ಪತ್ತೆಯಾಗಿದೆ.ಗುರುವಾರ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ಹಿನ್ನೆಲೆಯಲ್ಲಿ ಸ್ಥಳಿಯ ಅಗ್ನಿಶಾಮಕ ದಳ ಶಾಸಕ ಡಾ.ಎಚ್​.ಡಿ.ರಂಗನಾಥ್​ ನೇತೃತ್ವದಲ್ಲಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.

ಶವ ಹೊರ ತೆಗೆದ ಈಶ್ವರ್​ ಮಲ್ಪೆ:ಡಾ.ಎಚ್​.ಡಿ.ರಂಗನಾಥ್​ ಅವರು ಮುಳುಗು ತ ಈಶ್ವರ್​ ಮಲ್ಪೆ ಅವರನ್ನು ಕರೆಸಿದರು. ಈಶ್ವರ್​ ಮಲ್ಪೆ ಮತ್ತು ಅವರ ಸ್ನೇಹಿತರು ದೊಡ್ಡಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಕೆರೆಯ ಜಾಕ್​ ವೆಲ್​ನ ಸ್ವಲ್ಪ ದೂರದಲ್ಲಿ ಶವ ಇರುವುದನ್ನು ಪತ್ತೆ ಹಚ್ಚಿದ ತಂಡ

ಶವವನ್ನು ಕೆರೆಯಿಂದ ಹೊರ ತೆಗೆಯಿತು.

ಕಾರಣ ನಿಗೂಢ: ಬೆಂಗಳೂರಿನ ಸ್ಟ್​ಾವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾ ಅಲ್ಲಿಯೇ ಪಿಜಿಯಲ್ಲಿ ವಾಸವಾಗಿದ್ದಳು. 15 ದಿನಕ್ಕೆ ಒಮ್ಮೆ ಗ್ರಾಮಕ್ಕೆ ಬಂದು ಹೋಗುತ್ತಿದ್ದಳು. ೆ.25ರಂದು ಶಿವರಾತ್ರಿಗೆಂದು ಬಂದು ಬಳಿಕ ೆ.27ರಂದು ಬೆಳಗ್ಗೆ 7.15ರ ಸುಮಾರಿಗೆ ಬೆಂಗಳೂರಿಗೆ ಹೋಗಿದ್ದಳು. ಆದರೆ, ಮತ್ತೆ ಅದೇ ದಿನ ಮಧ್ಯಾಹ್ನ 2.30ಕ್ಕೆ ಕುಣಿಗಲ್​ಗೆ ವಾಪಸ್​ ಬಂದಿದ್ದು, ದೊಡ್ಡಕೆರೆ ಸತ್ಯ ಗಣಪತಿ ದೇವಾಲಯದ ಮಂಭಾಗದ ಜಾಕ್​ವೆಲ್​ ಬಳಿ ಮೊಬೆಲ್​, ಆಧಾರ್​ ಕಾರ್ಡ್​, ಬ್ಯಾಗ್​, ಚಪ್ಪಲಿ ಬಿಟ್ಟು ಕಾಣೆಯಾಗಿದ್ದಳು. ಸ್ಥಳಿಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಸಂಬಂಧಿಕರು ವಸ್ತುಗಳು ಸುಮಾಳವೇ ಎಂದು ಖಚಿತಪಡಿಸಿ ಹುಡುಕಾಟ ನಡೆಸಿ, ಕುಣಿಗಲ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಶವ ಪತ್ತೆಯಾಗಿದ್ದು, ಆತ್ಮಹತ್ಯಗೆ ಕಾರಣ ತಿಳಿದುಬರಬೇಕಾಗಿದೆ.