ಆನೇಕಲ್: ಪಟ್ಟಣ ಸಮೀಪದ ದೊಡ್ಡಕೆರೆ ಅಭಿವೃದ್ಧಿಗೆ ತಾಲೂಕಿನ ಎಲ್ಲ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.
ಆನೇಕಲ್‌ನ ದೊಡ್ಡಕೆರೆ ರಾಜಕಾಲುವೆ ತೆರವು ಕಾರ್ಯಾಚರಣೆ ಪ್ರದೇಶವನ್ನು ಶನಿವಾರ ಪರಿಶೀಲಿಸಿದ ಬಳಿಕ ಮಾತನಾಡಿದರು, ಪಟ್ಟಣಕ್ಕೆ ನೀರುಣಿಸುತ್ತಿದ್ದ ದೊಡ್ಡಕೆರೆಗೆ ಮಳೆಯಾಗುತ್ತಿದ್ದರೂ ನೀರು ಬಂದಿಲ್ಲ. ಆದ್ದರಿಂದ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದರು.
ಒತ್ತುವರಿ ಬಗ್ಗೆ ತಹಸೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆ ಮತ್ತು ರಾಜಕಾಲುವೆ ಹಾಗೂ ಕೆರೆಗಳ ಬಗ್ಗೆ ಕಾಳಜಿವಹಿಸಿರುವ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಅವರ ಶ್ರಮದಿಂದ ಕೆರೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸಹಕಾರ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಆನೇಕಲ್ ಪುರಸಭಾ ಅಧ್ಯಕ್ಷ ಎನ್. ಎಸ್ ಪದ್ಮನಾಭ ಮಾತನಾಡಿ, ರಾಜಕಾಲುವೆ ತೆರವಿಗೆ ಎಲ್ಲ ಅಧಿಕಾರಿಗಳು ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಆನೇಕಲ್ ಪುರಸಭೆಯೂ ಕೆರೆಯ ಅಭಿವೃದ್ಧಿ ಸಹಕಾರ ನೀಡಲಿದೆ ಎಂದರು.
ಸಣ್ಣ ನೀರಾವರಿ ಇಲಾಖೆ ಅಭಿಯಂತ ಡಾ.ಜೆ.ರಾಜಣ್ಣ ಮಾತನಾಡಿ, ಆನೇಕಲ್ ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರು ತುಂಬಿವೆ. ಆದರೆ ದೊಡ್ಡಕೆರೆಗೆ ನೀರು ಬಂದಿಲ್ಲ. ಇದಕ್ಕೆ ತಡೆಯಾಗಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗಮನ ಸೆಳೆದ ವಿಜಯವಾಣಿ, ದಿಗ್ವಿಜಯ: ಆನೇಕಲ್ ದೊಡ್ಡಕೆರೆಗೆ ಮಳೆಯಾಗುತ್ತಿದ್ದರೂ ನೀರು ಹರಿದು ಬರುತ್ತಿಲ್ಲ ಎನ್ನುವ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ವರದಿ ಮಾಡಿತ್ತು. ಈ ಬಗ್ಗೆ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಭೇಟಿ ನೀಡಿ ಚರ್ಚಿಸಿದಾಗ ರಾಜಕಾಲುವೆ ಒತ್ತುವರಿ ಬಗ್ಗೆ ತಿಳಿತು ಬಂತು. ಆದ್ದರಿಂದ ಈಗ ತೆರವು ಕಾರ್ಯಾಚರಣೆ ಕೈಗೊಳ್ಳಾಗಿದೆ ಎಂದು ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ತಿಳಿಸಿದರು.
ಮಳೆಯಾಗುತ್ತಿದ್ದರೂ ಆನೇಕಲ್ ದೊಡ್ಡಕೆರೆ ನೀರಿಲ್ಲದೆ ಬರಿದಾಗಿದೆ ಎನ್ನುವ ಬಗ್ಗೆ ವಿಜಯವಾಣಿ ಗಮನ ಸೆಳೆದಿತ್ತು. ರಾಜಕಾಲುವೆ ಒತ್ತುವರಿಯಾಗಿರುವ ಸ್ಥಳೀಯರಿಂದಲೂ ಮಾಹಿತಿ ಬಂದಿತ್ತು. ಈಗ ಎಲ್ಲರೂ ಒಗ್ಗಟ್ಟಿನಿಂದ ಕೆರೆ ಸುತ್ತಮುತ್ತಲಿನ ರಾಜಕಾಲುವೆ ತೆರವಿಗೆ ಮುಂದಾಗಿದ್ದೇವೆ. ದಿನೇಶ್ ತಹಸಿಸೀಲ್ದಾರ್