ಜಿಲ್ಲೆ

ದೊಡ್ಡಕಮರವಳ್ಳಿ ಗ್ರಾ.ಪಂ.ಗೆ ಅವಿರೋಧ ಆಯ್ಕೆ

ಬಾಲಮುರಳಿಕೃಷ್ಣ

ಬೆಟ್ಟದಪುರ: ಬೆಟ್ಟದಪುರ ಸಮೀಪದ ದೊಡ್ಡಕಮರವಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಎಸ್.ಡಿ. ಪುಟ್ಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿಶೇಖರ್ ಅವಿರೋಧ ಆಯ್ಕೆಯಾದರು.

ತೆರವಾಗಿದ್ದ ಎರಡು ಸ್ಥಾನಗಳಿಗೆ ಸೋಮವಾರ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಸ್.ಡಿ.ಪುಟ್ಟಸ್ವಾಮಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿಶೇಖರ್ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಹಾರಂಗಿ ಇಲಾಖೆಯ ರಂಗಯ್ಯ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎನ್.ಹರೀಶ್, ಜ್ಯೋತಿ ಇಂದ್ರೇಶ್, ಚಂದ್ರೆಗೌಡ, ಪಾರ್ವತಿ, ಸತೀಶ್ ಕುಮಾರ್, ವೀಣಾ, ಕಿರಣ್ ಕುಮಾರ್, ಪುಟ್ಟಮ್ಮ, ನೇತ್ರಾವತಿ, ಶೃತಿ, ಶಾಂಭವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಜಿ. ಕೀರ್ತಿ ಸೇರಿದಂತೆ ಮುಖಂಡರು ಹಾಗೂ ಸಿಬ್ಬಂದಿ ಇದ್ದರು.