ಜಿಲ್ಲೆ

ದೈಹಿಕ,ಮಾನಸಿಕ ಆರೋಗ್ಯಮುಖ್ಯ,ಶ್ರೀಬಸವಪ್ರಭು ಸ್ವಾಮೀಜಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಇನ್ನೊಬ್ಬರ ಹಂಗಿನಲ್ಲಿ ಬದುಕ ಬಾರದೆಂಬ ಬಸವಣ್ಣನವರ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಿದೆ ಎಂದು ಜೇವ ರ್ಗಿ ಮರುಳ ಶಂಕರ ದೇವರ ಗುರುಪೀಠದ ಅಧ್ಯಕ್ಷರಾದ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಜಗದ್ಗುರು ಮುರುಘಾ ರಾಜೇಂದ್ರ ಬೃಹನ್ಮಠದಿಂದ ಮಂಗಳವಾರ ಸಿದ್ದಾಪುರ ಸಾಯಿಬಾಬಾ ಸಭಾಂಗಣದಲ್ಲಿ ಮನೆ, ಮನೆಗೆ ಚಿಂತನೆ ‘ನಿತ್ಯಕಲ್ಯಾಣ’ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಬಸವಣ್ಣನವರು ಇಷ್ಟಲಿಂಗದ ಮೂಲಕ ಜನರಿಗೆ ಯೋಗಿಕ ದೃಷ್ಟಿ ಯನ್ನು ಕೊಟ್ಟರು. ಬಸವಾದಿ ಪ್ರಮಥರು ಯೋಗಿಕ ದೃಷ್ಟಿಯನ್ನು ಸಾಕಾರಗೊಳಿಸಿಕೊಂಡಿದ್ದು,ಈ ಸಾಧನೆಯಿಂದ ಜೀವನದಲ್ಲಿ ಶ್ರೇಷ್ಠ ಪರಿವರ್ತನೆ ಸಾಧ್ಯವಾಗಲಿದೆ ಎಂದರು.
ನೇತೃತ್ವ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,ಆರೋಗ್ಯ,ನೆಮ್ಮದಿಗೆ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು.ದೈಹಿಕ ಹಾಗೂ ಮಾನಸಿಕ ಆರೋಗ್ಯ ನಮಗೆ ಮುಖ್ಯ. ಸಾಮರಸ್ಯದ ಬದುಕೇ ನಿಜವಾದ ಯೋಗವೆಂದರು. ಯೋಗಿಕ ದೃಷ್ಟಿ ಕುರಿತು ಉಪನ್ಯಾಸ ನೀಡಿ ದ ಶಿಕ್ಷಕ ಪಿ.ಟಿ.ಉಮೇಶ್ ಅವರು,ಕರ್ಮಯೋಗಿಗಳೆಂದರೆ ಕೃಷಿಕರು. ನಿತ್ಯ ದಾಸೋಹಕ್ಕೆ ಶ್ರಮಿಸುತ್ತಿರುವ ಅವರು,ನಿರ್ಲಿಪ್ತ ಜೀವನ ಸಾಗಿಸುತ್ತಿದ್ದಾರೆ.
ವ್ಯಕ್ತಿತ್ವ ವಿಕಸನದೆಡೆ ಯುವಜನರು ಗಮನ ಕೊಡ ಬೇಕು. ತಾಳ್ಮೆ ರಹಿತ ಜೀವ ನಮ್ಮದಾಗಬಾರದು. ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸಬೇಕು ಎಂದರು. ದಾಸೋಹ ದಾನಿ ಚೈತ್ರಾ ಸುಧೀರ್,ಪಿ.ಟಿ.ಜ್ಞಾನಮೂರ್ತಿ,ಆರ್.ಲಿಂಗರಾಜು,ವೀರೇಂದ್ರಕುಮಾರ್,ಸ್ಮಿತಾ ಮತ್ತಿತರರು ಇದ್ದರು. ಅರುಣಕುಮಾರ್ ಪ್ರಾರ್ಥಿಸಿದರು, ಎಸ್.ಅನಿತಾ ನಿರೂಪಿಸಿದರು.
(ಸಿಟಿಡಿ 23 ಮುರುಘಾ)
ಚಿತ್ರದುರ್ಗ ತಾಲೂಕು ಸಿದ್ದಾಪುರದಲ್ಲಿ ಮಂಗಳವಾರ ಮುರುಘಾರಾಜೇಂದ್ರ ಮಠದಿಂದ ಏರ್ಪಡಿಸಿದ್ದ ಮನೆ,ಮನೆಗೆ ಶ್ರಾವಣ ಚಿಂ ತನಾ‘ನಿತ್ಯಕಲ್ಯಾಣ’ದಲ್ಲಿ ಕಾರ‌್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿದರು. ಜೇವರ್ಗಿ ಮರುಳ ಶಂಕರ ದೇವರ ಗುರು ಪೀ ಠದ ಅಧ್ಯಕ್ಷರಾದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ,ಶಿಕ್ಷಕ ಪಿ.ಟಿ.ಉಮೇಶ್ ಇದ್ದರು.