ನೇಸರಗಿ: ದೈಹಿಕವಾಗಿ ಸದೃಢರಾಗಲು ಕ್ರೀಡೆ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ ಹಾಗೂ ಬಾಲಕಿಯರ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಹುಮ್ಮಸ್ಸು, ಉತ್ಸಾಹ ಹೆಚ್ಚುತ್ತದೆ ಎಂದರು.
ಬಾಲಕರ ಪ್ರಾಥಮಿಕ ವಿಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಸವದತ್ತಿ (ಪ್ರಥಮ), ಸರ್ಕಾರಿ ಪ್ರಥಮಿಕ ಶಾಲೆ ರಾಮದುರ್ಗ (ದ್ವಿತೀಯ), ಬಾಲಕಿಯರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಖಾನಾಪುರ (ಪ್ರಥಮ) ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ (ದ್ವಿತೀಯ) ಸ್ಥಾನ ಪಡೆದುಕೊಂಡಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪ್ಯಾಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜಿ.ಹೊರಟ್ಟಿ, ಶಂಕರ ಕರೀಕಟ್ಟಿ, ಬೈಲಹೊಂಗಲ ತಾಲೂಕು ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಶಿಕ್ಷಣ ಸಂಯೋಜಕ ಮಹೇಶ ಯರಗಟ್ಟಿ, ಎನ್.ಬಿ.ಬನ್ನೆಪ್ಪಗೋಳ, ಪಾದರ ಹ್ಯಾರಿ ವಿಕ್ಟರ್ ಡಿಕ್ರೋಜ್, ಸಿ.ಎಸ್.ಭಜಂತ್ರಿ, ಬಿ.ಡಿ.ತಮ್ಮಣ್ಣವರ, ಇಸ್ಮಾಯಿಲ್ ತಿಗಡಿ, ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್.ಐ.ಬೆಳವಣಕಿ, ಎಸ್.ಐ.ಮಿರ್ಜನ್ನವರ, ಜಿ.ಎಸ್.ಮಿರ್ಜನ್ನವರ, ಎಂ.ಬಿ.ಬಾಗೇವಾಡಿ, ಮಹಾಂತೇಶ ಮುರಗೋಡ, ಪ್ರಶಾಂತ ಹಂಜಿ, ಎಸ್.ಬಿ.ಮಲಗೌಡರ ಇತರರು ಇದ್ದರು.