ಹುಣಸಗಿಯಲ್ಲಿ ಜರುಗಿದ ವಲಯಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಯಲ್ಲಿ ಕೊಡೇಕಲ್ ಗ್ರಾಮದ ಕೆಜಿಬಿವಿ ವಸತಿ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರಿಂದ ದೈಹಿಕ ಶಿಕ್ಷಕಿ ರೇಣುಕಾ ಹಾಗೂ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ಪ್ರಾಚರ‍್ಯೆ ರಾಚಮ್ಮ ಪೂಜಾರಿ, ಈರಮ್ಮ, ಪರ್ವಿನ್, ಸಂಗೀತಾ, ರೇಣುಕಾ, ಚಂದನ, ಸಂಗಮ್ಮ, ವಿಜಯಲಕ್ಷ್ಮೀ, ಶಕುಂತಲಾ, ಭಾಗ್ಯಶ್ರೀ, ಮೈತ್ರಾ ಇತರರಿದ್ದರು. 
ಜಿಲ್ಲೆ

ದೈಹಿಕ ಬಲವರ್ಧನೆಗೆ ಕ್ರೀಡೆಗಳು ಸಹಕಾರಿ

ಕೊಡೇಕಲ್: ಕ್ರೀಡೆಗಳು ನಮ್ಮ ದೈಹಿಕ ಬಲವರ್ಧನೆಗೆ ಸಹಕಾರಿಯಾಗಿವೆ ಎಂದು ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆ ಪ್ರಾಚಾರ್ಯೆ ರಾಚಮ್ಮ ಪೂಜಾರಿ ಹೇಳಿದರು.

ಹುಣಸಗಿಯಲ್ಲಿ ಹಮ್ಮಿಕೊಂಡ ಪ್ರಾಥಮಿಕ ಶಾಲೆಗಳ ಕೊಡೇಕಲ್ ವಲಯ ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಸತ್ಕರಿಸಿ ಮಾತನಾಡಿದ ಅವರು, ಪುರುಷರ ಜತೆಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಕ್ರೀಡೆಯಲ್ಲಿ ಮಿಂಚುತ್ತಿರುವುದು ಶ್ಲಾಘನೀಯ. ಕಳೆದ ಹಲವು ವರ್ಷಗಳಿಂದ ವಸತಿ ಶಾಲೆಯ ದೈಹಿಕ ಶಿಕ್ಷಕಿಯಾಗಿ ಕರ‍್ಯ ನಿರ್ವಹಿಸುತ್ತಿರುವ ರೇಣುಕಾ ಅವರ ತರಬೇತಿಯಿಂದ ವಸತಿ ನಿಲಯದ ಮಕ್ಕಳು ವಿವಿಧ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ವಲಯ ಮಟ್ಟದ ಕ್ರೀಡಾಕೂಟದ 100 ಮೀ ಓಟದ ಸ್ಪರ್ಧೆಯಲ್ಲಿ ಚಂದುಬಾಯಿ, 200 ಮೀ ಓಟದಲ್ಲಿ ಚೈತ್ರಾ, 400 ಓಟದಲ್ಲಿ ಚಂದುಬಾಯಿ, 600 ಓಟದಲ್ಲಿ ಚೈತ್ರಾ, ಗುಂಡು ಎಸೆತದಲ್ಲಿ ನೈಲಾ, ಚಕ್ರ ಎಸೆತದಲ್ಲಿ ಅಮೃತಾ ಮತ್ತು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು, 200 ಮೀ ಮತ್ತು 600 ಮೀ ಓಟದಲ್ಲಿ ಬಸಮ್ಮ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಈರಮ್ಮ, ಪರ್ವಿನ್, ಸಂಗೀತಾ, ರೇಣುಕಾ, ಚಂದನ, ಸಂಗಮ್ಮ, ವಿಜಯಲಕ್ಷ್ಮೀ, ಶಕುಂತಲಾ, ಭಾಗ್ಯಶ್ರೀ. ಮೈತ್ರಾ ಇತರರಿದ್ದರು. ಈ ವೇಳೆ ಕ್ರೀಡಾಪಟುಗಳನ್ನು ಮತ್ತು ದೈಹಿಕ ಶಿಕ್ಷಕಿ ರೇಣುಕಾ ಅವರನ್ನು ಸನ್ಮಾನಿಸಲಾಯಿತು.