filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (-1, -1); aec_lux: 207.26672; hist255: 0.0; hist252~255: 0.0; hist0~15: 0.0; 
ಜಿಲ್ಲೆ

ದೈವ ಕಾರ್ಯ ಸಂಪ್ರದಾಯ ಕೃಷಿಯು ಕಾಯಕದ ಭಾಗ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ದೈವ ಕಾರ್ಯವು ಸಂಪ್ರದಾಯದ ಭಾಗವಾಗಿದ್ದರೆ, ಕೃಷಿಯು ಕಾಯಕದ ಭಾಗವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಪಂಚಮುಖಿ ದೇವಾಲಯದ ಮೈದಾನದಲ್ಲಿ ಭಾನುವಾರ ತಾಲೂಕು ಕಮ್ಮವಾರಿ ಸಂಘದಿಂದ ಆಯೋಜಿಸಿದ್ದ ನವರಾತ್ರಿ ಸಂಭ್ರಮ ಹಾಗೂ ಗಣೇಶೋತ್ಸವದಲ್ಲಿ ಮಾತನಾಡಿದರು.
ದೇಶಕ್ಕೆ ಅನ್ನ ಕೊಡುವಲ್ಲಿ ಒಕ್ಕಲಿಗ ಹಾಗೂ ಕಮ್ಮವಾರಿ ಸಮುದಾಯದ ಪಾತ್ರ ಅನನ್ಯವಾಗಿದೆ, ಇದರ ಜತೆ ನಮ್ಮ ಸಂಪ್ರದಾಯದಂತೆ ದೈವ ಕಾರ್ಯಗಳಲ್ಲಿ ಸರ್ವಜನಾಂಗದವರೂ ಸೇರಿ ಅದ್ದೂರಿಯಿಂದ ನವರಾತ್ರಿ ಉತ್ಸವ ಹಾಗೂ ಗಣೇಶೋತ್ಸವದಲ್ಲಿ ಭಾಗಿಯಾಗುವ ಮೂಲಕ ಸಮಾಜದಲ್ಲಿ ಒಗ್ಗಟ್ಟಿನ ಜತೆ ಶಾಂತಿ ನೆಮ್ಮದಿಯಿಂದ ಬಾಳ್ವೆ ನಡೆಸಲು ಸಹಕಾರಿಯಾಗಲಿದೆ ಎಂದರು.
ತಾಲೂಕು ಕಮ್ಮವಾರಿ ಸಂಘದ ಅಧ್ಯಕ್ಷರೂ ಆದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಕಮ್ಮವಾರಿ ಜನಾಂಗಕ್ಕೆ 5 ಎಕರೆ ಜಾಗದ ಬೇಡಿಕೆಯಿದ್ದು, ಅದರಲ್ಲಿ ಶಿಕ್ಷಣ ಸಂಸ್ಥೆ ಜತೆ ವಸತಿ ನಿಲಯ, ಆರೋಗ್ಯ ಕೇಂದ್ರ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಜಮೀನಿನ ಅವಶ್ಯಕತೆಯಿದೆ. ಜನಾಂಗದ ಜತೆ ಸಮಾಜದ ಇತರ ಜನಾಂಗಕ್ಕೂ ಒಳಿತು ಮಾಡುವ ನಿಟ್ಟಿನಲ್ಲಿ ಜಾಗದ ಬೇಡಿಕೆ ಈಡೇರಿಸಲು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಮಾಜಿ ಎಂಎಲ್ ಸಿಆರ್‌ವಿ ಹರೀಶ್, ಆರ್.ವಿ.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ರೆಡ್ಡಿ, ನಗರಸಭೆ ಸದಸ್ಯರುಗಳಾದ ಸುಗುಣಾ ಮೋಹನ್, ಜಮುನಾ ಹರೀಶ್, ಮುಖಂಡರಾದ ವಾಸುದೇವಯ್ಯ, ಮಧು, ಎಚ್.ಕೆ.ಮಂಜುನಾಥ್, ಮೋಹನ್, ಎಚ್ ಎಸ್ ಗೋಪಾಲ್ ಇದ್ದರು.

ಜಗತ್ತಿನಲ್ಲಿ ಕದಿಯಲಾರದ ಸಂಪತ್ತೆಂದರೆ ಅದು ವಿದ್ಯೆ, ಶಿಕ್ಷಣ ಸಂಸ್ಥೆ ಎಂಬ ಒಳ್ಳೆಯ ಉದ್ದೇಶಕ್ಕೆ ನಿವೇಶನದ ಬೇಡಿಕೆಯಿಟ್ಟಿದ್ದು, ಅನುಗೊಂಡನಹಳ್ಳಿ ಭಾಗದಲ್ಲಿ 5 ಎಕರೆ ಜಾಗ ನೀಡಲಾಗುವುದು.ಶರತ್ ಬಚ್ಚೇಗೌಡ ಶಾಸಕ ತಾಲೂಕಿನಲ್ಲಿ ಕಮ್ಮವಾರಿ ಸಮುದಾಯದಿಂದ ಇದೇ ಮೊದಲ ಬಾರಿಗೆ ನವರಾತ್ರಿ ಉತ್ಸವ ಹಾಗೂ ಗಣೇಶೋತ್ಸವ ಆಚರಣೆ ಮಾಡಲಾಗಿದ್ದು, ಶಾಸಕ ಶರತ್ ಬಚ್ಚೇಗೌಡ, ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಜತೆ ತಾಲೂಕಿನ ಎಲ್ಲ ಜನಾಂಗದವರು ಸಹಕಾರ ನೀಡಿದ್ದಾರೆ.ಎಚ್.ಎಸ್.ಗೋಪಾಲ್ ಮುಖಂಡ