ಚಿಕ್ಕಮಗಳೂರಿನ ಜಾಗರದಲ್ಲಿ ಹೋಬಳಿ ಕಸಾಪ ಘಟಕದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭವನ್ನು ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ಬಿಸಿಲೇಹಳ್ಳಿ ಸೋಮಶೇಖರ್, ವಾಸು ಪೂಜಾರಿ ಮತ್ತಿತರರಿದ್ದರು. 
ಜಿಲ್ಲೆ

ದೈನಂದಿನ ಬದುಕಿನಲ್ಲಿ ತನು, ಮನ ಕನ್ನಡವಾಗಿರಲಿ

ಚಿಕ್ಕಮಗಳೂರು: ದೈನಂದಿನ ಬದುಕಿನಲ್ಲಿ ತನು, ಮನ, ನುಡಿ ಕನ್ನಡವಾಗಿರಬೇಕು. ಹತ್ತಾರು ಭಾಷೆ ಕಲಿತರೆ ತಪ್ಪೇನಿಲ್ಲ. ಮುಖ್ಯವಾಗಿ ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಶಿರವಾಸೆ ಗ್ರಾಮದ ಶ್ರೀ ಗಜಾನನ ಕಲಾಮಂದಿರದಲ್ಲಿ ಜಾಗರ ಕಸಾಪ ಹೋಬಳಿ ಘಟಕದಿಂದ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನೋಪಾಯಕ್ಕಾಗಿ ಯಾವುದೇ ರಾಜ್ಯ ಅಥವಾ ವಿದೇಶಗಳಿಗೆ ತೆರಳಿ ಅಲ್ಲಿನ ಸ್ಥಳೀಯ ಭಾಷೆ ಕಲಿತು ಕೊಂಡರೆ ತಪ್ಪಿನಿಲ್ಲ. ಜೊತೆಗೆ ಕನ್ನಡ ಭಾಷೆಯ ಸ್ವಾಭಿಮಾನ, ಘನತೆ ಹಾಗೂ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಹೀಗಾಗಿ ಕನ್ನಡಿಗರಾದ ನಾವುಗಳು ಎಲ್ಲೇ ತೆರಳಿದರೂ ಭಾಷೆಯ ಸೊಗಡನ್ನು ಇತರರಿಗೂ ಪರಿಚಯಿಸಬೇಕು ಎಂದು ಹೇಳಿದರು.

ನಾಡಿನ ನೆಲದಲ್ಲಿ ಜನಿಸಿರುವ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಎಂದಿಗೂ ನಶಿಸದಂತ ವಿಶೇಷ ಶಕ್ತಿಯಿದೆ. ಆಯಾಯ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಗೌರವಿಸಿದಂತೆ, ಕನ್ನಡಿಗರಾದ ನಾವುಗಳು ನಮ್ಮ ತಾಯಿನುಡಿಗೆ ಎಲ್ಲದಕ್ಕಿಂತ ಒಂದುಪಟ್ಟು ಹೆಚ್ಚು ಪ್ರೀತಿಸುವ ಕಾಳಜಿ ಹೊಂದಬೇಕು ಎಂದರು.

ಇಡೀ ಜಿಲ್ಲೆಯಲ್ಲಿ ಜಾಗರ ಕಸಾಪ ಹೋಬಳಿ ಘಟಕ ರಾಜ್ಯೋತ್ಸವವನ್ನು ಪ್ರತಿವರ್ಷವು ವಿಜೃಂಭಣೆಯಿAದ ಆಚರಿಸುತ್ತಿದೆ. ಗ್ರಾಮದ ಸುತ್ತಮುತ್ತಲು ಕನ್ನಡಧ್ವಜ ಹಾಕುವುದು, ಕರಪತ್ರ ಅಂಟಿಸಿರುವುದು ಅಲ್ಲದೇ ಮನೆ ಮನೆಗಳಿಗೆ ತೆರಳಿ ರಾಜ್ಯೋತ್ಸವ ಆಚರಣೆ ಆಹ್ವಾನಿಸುವ ಮುಖಾಂತರ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾಗಿರುವುದು ಖುಷಿಯ ಸಂಗತಿ ಎಂದರು.

ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಾಂಭೆ ನಾಡಿನಲ್ಲಿ ನೆಲೆಯೂರಲು ಹಲವಾರು ದಾರ್ಶನಿಕರು, ಕೀರ್ತನೆಕಾರರು, ಕವಿಸಾಹಿತಿಗಳು ಹಾಗೂ ರಾಜ ಮಹಾರಾಜರ ವಿಶೇಷ ಕೊಡುಗೆಯಿದೆ. ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಇಂದಿನ ಯುವ ಸಮೂಹ ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಾಗರ ಹೋಬಳಿ ಅಧ್ಯಕ್ಷ ವಾಸು ಪೂಜಾರಿ, ಭಾಷೆ ಬೆಳವಣಿಗೆಗೆ ಅನಾದಿ ಕಾಲದಿಂದಲೇ ಕದಂಬರು, ಚಾಲುಕ್ಯರು, ವಿಜಯನಗರದ ಅರಸರು, ದಾಸ, ವಚನ ಸಾಹಿತ್ಯಾಸಕ್ತರ ಸಹಕಾರ ಬಹಳಷ್ಟಿದೆ. ಈ ಸೊಗಡಿನಿಂದಲೇ ಇಂದು ವಿಶ್ವದಲ್ಲೇ ಕನ್ನಡವು ತನ್ನದೇ ವಿಶಿಷ್ಟ ಪರಂಪರೆ ಹೊಂದಿದೆ ಎಂದು ತಿಳಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಮಹಾಭಾರತದ ಸನ್ನಿವೇಶದಲ್ಲಿ ಶಕುನಿಯ ಏಕಾಪಾತ್ರಭಿನಯ ನಿರ್ವಹಿಸಿ ಗ್ರಾಮಸ್ಥರ ಹಾಗೂ ಮಕ್ಕಳ ಪ್ರಶಂಸೆಗೆ ಪಾತ್ರರಾದರು. ಇದೇ ವೇಳೆ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರವನ್ನು ವಿವಿಧ ಕಲಾತಂಡಗಳೊAದಿಗೆ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಕಲಚೇತನರಿಂದ ರಸಮಂಜರಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್, ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಚಂದ್ರೇಗೌಡ, ಕೆ.ವಿ.ರವಿಕುಮಾರ್, ಮುಖಂಡರಾದ ಶಂಕರ್, ಜೆ.ಸಿ.ಲಕ್ಷö್ಮಣ್, ದೇಜು, ವೆಂಕಟೇಶ್, ಡಿ.ಜೆ. ಶ್ಯಾಮಲಾ, ಕಾಫಿ ಬೆಳೆಗಾರ ಎಚ್.ಎಸ್. ಮಲ್ಲೇಶ್ ಮತ್ತಿತರರಿದ್ದರು.