ಜಿಲ್ಲೆ

ದೇಹ,ಮನಸ್ಸು,ಆತ್ಮ ಸಂಯೋಜನೆಯೇ ಯೋಗ

ಚಿತ್ರದುರ್ಗ: ಯೋಗಾಭ್ಯಾಸ, ದೈಹಿಕ ಕಸರತ್ತು ಅಲ್ಲವೆಂದು ಯೋಗ ಶಿಕ್ಷಕ ಕೆ.ಬಿ.ಮಹೇಂದ್ರಕುಮಾರ್ ಹೇಳಿದರು. ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು,ಯೋಗವೆಂದು ಒಂದು ವಿಜ್ಞಾನ,ದೇಹ,ಮನಸ್ಸು ಮತ್ತು ಆತ್ಮವನ್ನು ಸಂಯೋಜಿಸುವ ವಿಧಾನವಾಗಿದೆ.
ನಡಿಗೆ,ಜಿಮ್‌ನಂಥ ಶ್ರಮದ ಚಟುವಟಿಕೆಗಳಿಂದ ದೈಹಿಕ ಸದೃಢತೆಗೆ ಸಹಕಾರಿಯಾಗಬಹುದು, ಆದರೆ ಯೋಗ,ಧ್ಯಾನ ಮತ್ತು ಪ್ರಾಣಾಯಾ ಮಗಳಿಂದ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಿಕೊಂಡು,ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ. ಆತಂಕ,ದುಃಖ ಹಾಗೂ ಒತ್ತಡದಿಂದ ಮುಕ್ತವಾಗಿ ನವಚೈತನ್ಯದ ಜೀವನಕ್ಕೆ ಸಹಾಯಕವಾಗುತ್ತದೆ ಎಂದರು.
ಅಂಚೆಪಾಲಕ ಕೆ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಎನ್.ಅನಿಲ್‌ಕುಮಾರ್,ಮಹೇಂದ್ರಕುಮಾರ್,ನಿಜಲಿಂಗಪ್ಪ,ಹೊನ್ನಾಳಿರೆಡ್ಡಿ, ಮಂಜುನಾಥ
ಬಸವಕುಮಾರ್,ಶ್ರೀನಿವಾಸ,ಸಿದ್ದಪ್ಪ,ಸುಧಾ,ಕೃಷ್ಣವೇಣಿ,ಭವ್ಯಶ್ರೀ,ನಿರ್ಮಲಾ ಮತ್ತಿತರರು ಇದ್ದರು.
(ಸಿಟಿಡಿ 22 ಪೋಸ್ಟ್ ಯೋಗ)
ಚಿತ್ರದುರ್ಗ ಪ್ರಧಾನ ಅಂಚೆಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೆ.ದೇವರಾಜ್, ಎನ್.ಅನಿ ಲ್‌ಕುಮಾರ್,ಮಹೇಂದ್ರಕುಮಾರ್,ನಿಜಲಿಂಗಪ್ಪ, ಸುಧಾ,ಕೃಷ್ಣವೇಣಿ,ಭವ್ಯಶ್ರೀ,ನಿರ್ಮಲಾ ಇತರರು ಇದ್ದರು.