ಜಿಲ್ಲೆ

ದೇಹ, ಮನಸ್ಸಿನ ಶುದ್ಧತೆ ಸ್ವಚ್ಛ ಸಮಾಜಕ್ಕೆ ನಾಂದಿ

ಚಿತ್ರದುರ್ಗ: ನಮ್ಮ ಶರೀರದ ಶುದ್ಧತೆ ಮನಸ್ಸಿನ ಪ್ರಫುಲ್ಲತೆ ಕಾರಣ. ಇದರಿಂದ ಸ್ವಚ್ಛ ಸಮಾಜಕ್ಕೆ ಪ್ರೇರಣೆ ಸಿಗುತ್ತದೆ ಎಂದು ಯೋಗ ಗುರು ಚನ್ನಬಸವಣ್ಣ ಹೇಳಿದರು.
ಮುರುಘಾಮಠದಲ್ಲಿ ಬುಧವಾರ ಶರಣ ಸಂಸ್ಕೃತಿ ಉತ್ಸವ, ಶ್ರೀ ಜಯದೇವ ಶ್ರೀ 150ನೇ ಜಯಂತ್ಯುತ್ಸ ವದ ಅಂಗವಾಗಿ ಏರ್ಪಡಿಸಿರುವ ಯೋಗ ಆರೋಗ್ಯ, ಆಧ್ಯಾತ್ಮ ಶಿಬಿರದ ಯೋಗ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಬಸವಾದಿ ಶರಣರು ಸಕಲ ಜೀವರಾಶಿಗೂ ಲೇಸನ್ನೇ ಬಯಸಿದರು. 84 ಲಕ್ಷ ಜೀವರಾಶಿ ದಾಟಿ ಮನುಷ್ಯ ಜನ್ಮಕ್ಕೆ ನಾವು ಬಂದಿದ್ದೇವೆ. ಆದ್ದರಿಂದ ದೇಹ, ಮನಸ್ಸು ಶುದ್ಧವಾಗಿಟ್ಟುಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿದರು. ಜಮುರಾ ಕಲಾವಿ ದರು ವಚನ ಸಂಗೀತ ನಡೆಸಿಕೊಟ್ಟರು. ಸಿದ್ದಗಂಗಮ್ಮ ಸ್ವಾಗತಿಸಿದರು. ಸುಮಾ ರಾಜಶೇಖರ್ ವಂದಿಸಿದರು. ಹೇಮಲತಾ ನಿರೂಪಿಸಿದರು.
ಆಧುನಿಕ ಆಹಾರದಿಂದ ರೋಗ
ಚಿತ್ರದುರ್ಗ: ನಮಗೀಗ ಸುಲಭವಾಗಿ ಎಲ್ಲವೂ ಲಭ್ಯವಾಗಬೇಕು. ಐಷಾರಾಮಿ,ಆಡಂಬರ ಮನೋಭಾವದಿಂದ ಪೂರ್ವಿಕರ ವೈಜ್ಞಾನಿಕ ಆಚರಣೆ ತಿರಸ್ಕರಿಸಿ, ಆಧುನಿಕ ಆಹಾರ ಪದ್ಧತಿಗೆ ಮೊರೆ ಹೋಗಿದ್ದೇವೆ ಇದರಿಂದಾಗಿ ಭಾರತ ರೋಗಗಳ ತವರೂರಾಗುತ್ತಿದೆ ಎಂದು ಯೋಗ ಗುರು ಚನ್ನಬಸವಣ್ಣ ಕಳವಳ ವ್ಯಕ್ತಪಡಿಸಿದರು.
ಮುರುಘಾಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಆರೋಗ್ಯ ಆಧ್ಯಾತ್ಮ ಪ್ರವಚನ ಕಾರ‌್ಯಕ್ರಮದಲ್ಲಿ ಮಾತನಾಡಿ, ಆಹಾರದಿಂದಲೇ ಆರೋಗ್ಯ ಎಂಬ ಜಾಗೃತಿ ಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಲಬುರಗಿ ಚಿಗರಹಳ್ಳಿ ಮರುಳಶಂಕರಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿದರು.
ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಶ್ರೀ, ಕೊಲ್ಲಾಪುರದ ಶಿವಾನಂದ ಶ್ರೀ, ಮುರುಘಾಮಠದ ಮುರುೇಂದ್ರ ಶ್ರೀ, ನಿಪ್ಪಾಣಿ ಮಲ್ಲಿಕಾರ್ಜುನ ಶ್ರೀ, ಗೋವಿಂದ ಶ್ರೀ, ಮೈಸೂರಿನ ಕಲ್ಯಾಣಮ್ಮ ಹಾಗೂ ಜಯದೇವಿ ತಾಯಿ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್.ವಿ. ರವಿಶಂಕರ್ ಸ್ವಾಗತಿಸಿದರು. ಉಪನ್ಯಾಸಕ ನವೀನ್ ಮಸ್ಕಲ್ ನಿರ್ವಹಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.