ಜಿಲ್ಲೆ

ದೇಸಿ ತಳಿಗಳ ಸಂರಕ್ಷಣೆ,ಅಭಿವೃದ್ಧಿಗೆ ಕೃಷಿ ಇಲಾಖೆ ಪ್ಲಾನ್

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರಾಜ್ಯದ ರೈತರ ಬಳಿ ಇರುವ ದೇಸಿ ತಳಿಗಳ ಸಂರಕ್ಷಣೆ,ಅಭಿವೃದ್ಧಿ ಹಾಗೂ ಈ ತಳಿಗಳ ಬೆಳೆ ಪ್ರದೇಶ ವಿಸ್ತರಣೆಗೆ ಕೃಷಿ ಇಲಾಖೆ ಮುಂ ದಾಗಿದೆ. ಪ್ರತಿ ಜಿಲ್ಲೆಯಲ್ಲಿರುವ,ಭೌಗೋಳಿಕವಾಗಿ ಮಹತ್ವ ಪಡೆದಿರುವ,ವಿಶೇಷ ರುಚಿ,ವೈಶಿಷ್ಟೃ ಹಾಗೂ ಔಷಧೀ ಯ ಗುಣಗಳಿರುವಂಥ ಭತ್ತ,ನವಣೆ,ಶೇಂಗಾ ಇತ್ಯಾದಿ ಅತ್ಯುತ್ತಮ ಪ್ರಾದೇಶಿಕ ತಳಿ ಬೆಳೆಗಳನ್ನು ಬೆಳೆಯುತ್ತಿರುವ ಕೃಷಿಕರನ್ನು ಗುರುತಿಸುವಂತೆ ಇಲಾಖೆ ಅಧಿ ಕಾರಿಗಳಿಗೆ ಸೂಚಿಸಿದೆ.

ಈಚೆಗೆ ಬೆಂಗಳೂರಲ್ಲಿ ನಡೆದ ಇಲಾಖೆ ರಾಜ್ಯಮಟ್ಟದ ಕಾರ‌್ಯಾಗಾರದಲ್ಲಿ ಯೋಜನೆ ಕುರಿತಂತೆ ವಿಸ್ತೃತ ಚರ್ಚಿಸಿರುವ ಅಧಿಕಾರಿಗಳು, ಇದಕ್ಕಾಗಿ ಪ್ರತ್ಯೇಕ ಪೋರ್ಟ್‌ಲ್ ಸಿದ್ಧಪಡಿಸಲಿದ್ದಾರೆ. ರೈತರು ತಮ್ಮ ಬಳಿ ಇರುವ ತಳಿಗಳ ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸ ಬೇಕಿದೆ. ಇದಕ್ಕಾಗಿ ಜಾಗೃತಿ ಮೂಡಿಸಿ,ತಳಿಗಳ ಸಂರಕ್ಷಣೆಗೆ ರೈತರನ್ನು ಅಧಿಕಾರಿಗಳು ಪ್ರೋತ್ಸಾಹಿಸ ಬೇಕಿದೆ. ನೋಂದಣಿ ತಳಿಗಳ ಸ್ಯಾಂಪ ಲ್‌ಗಳನ್ನು ಬೆಂಗಳೂರು ಜಿಕೆವಿಕೆ ಜಿನೋಮ್ ಬ್ಯಾಂಕ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಈ ತಳಿಗಳ ಬೆಳೆಗಳ ಪ್ರದೇಶ ವಿಸ್ತರ ಣೆಗೆ ರೈತರಿಗೆ ನೆರವು ಒದಗಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಮುಂದಿನ ಐದು ವರ್ಷಗಳ ಅವಧಿಯೊಳಗೆ,ಪ್ರಾದೇಶಿಕ ಮಹತ್ವದ ತಳಿಗಳ ಬೆಳೆಗಳಿಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸುವ ಮೂ ಲಕ ರೈತರ ಆರ್ಥಿಕ ಪರಿಸ್ಥಿತಿ ಬಲಪಡಿಸುವ ಚಿಂತನೆ ಇಲಾಖೆಯದ್ದಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ರೈತರನ್ನು ಗುರುತಿಸಲು ಮುಂದಾ ಗಿದೆ. ರೈತ ಉತ್ಪಾದಕ ಕಂಪನಿಗಳು ಕೈ ಜೋಡಿಸುವ ಸಾಧ್ಯತೆ ಇದೆ.

ರಾಷ್ಟ್ರಮಟ್ಟದಲ್ಲಿ ಪ್ರಥಮ ಗುರಿ

ಪ್ರಸಕ್ತ ಸಾಲಿನಲ್ಲಿ ತೊಗರಿ ಬೆಳೆಯಲ್ಲಿ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ತರುವ ಗುರಿಯೊಂದಿಗೆ ಮಧ್ಯಮಾವಧಿ ತೊಗರಿ ತಳಿಗಳನ್ನು ಪರಿಚಯಿಸಲಾಗುತ್ತಿದೆ. ಕಲಬುರುಗಿ,ರಾಯಚೂರು,ವಿಜಯಪುರ,ಬೀದರ್,ಬಾಗಲಕೋಟೆ ಇತ್ಯಾದಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೆಳೆಯುವ ಜಿಲ್ಲೆಗಳ ಸಹಿತ ರಾಜ್ಯದಲ್ಲಿ ಪ್ರಸ್ತುತವಿರುವ ಅಂದಾಜು 14.50 ಲಕ್ಷ ಹೆಕ್ಟೇರ್ ತೊಗರಿ ಬೆಳೆ ವಿಸ್ತೀರ್ಣವನ್ನು 20 ಲಕ್ಷ ಕ್ಕೂ ಅಧಿಕ ಹೆಕ್ಟೇರ್‌ಗೆ ವಿಸ್ತರಿಸುವ ಉದ್ದೇಶವಿದೆ.

ಹರಳು ಬೆಳೆ

ಹರಳು(ಔಡಲ)ಬೆಳೆ ವಿಸ್ತರಣೆಗೆ ಕಳೆದ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಯತ್ನ ನಡೆದಿತ್ತು. ಈಗ ರಿಯಾಯಿತಿ ದರದಲ್ಲಿ ಹರಳು ಬಿ ತ್ತನೆ ಬೀಜ ವಿತರಿಸಲು ಮುಂದಾಗಿದೆ. ಐಸಿಎಚ್5 ತಳಿಯೊಂದಿಗೆ ಹರಳು ಬೆಳೆಗೆ ರೈತರು ಪ್ರೋತ್ಸಾಹಿಸಲಾಗುತ್ತಿದೆ. ಬಿತ್ತನೆ ಬೀಜ ಸಹಿತ ಒಂದು ಎಕರೆಗೆ ಅಂದಾಜು 8 ಸಾವಿರ ರೂ.ವೆಚ್ಚದಲ್ಲಿ 25-30 ಕ್ವಿಂಟಾಲ್ ಇಳುವರಿ ನಿರೀಕ್ಷೆ ಹರಳು,ಕ್ವಿಂಟಾಲ್‌ಗೆ 5500-6000 ರೂ.ದರವಿದೆ. ಹೊಸದುರ್ಗದಲ್ಲಿ ಕಳೆದ ಬಾರಿ ಪರಿಚಯಿಸಿದ್ದ ಸಿಎಲ್‌ಎಂವಿ 1 ತಳಿಯಯೊಂದಿಗೆ ಸಾವೆ ಬೆಳೆ ವಿಸ್ತರಿಸಲಾಗುತ್ತಿದೆ.

---

ಕೋಟ್

ದೇಸಿ ತಳಿಗಳ ಸಂರಕ್ಷಣೆ,ಅಭಿವೃದ್ಧಿ ಯೋಜನೆ ಅನುಷ್ಠಾನವಾಗುತ್ತಿದೆ. ದೇಶದಲ್ಲಿ ತೊಗರಿ ಬೆಳೆಯಲ್ಲಿ ಕರ್ನಾಟಕ ನಂ.1 ಮಾಡ ಬೇ ಕೆಂಬ ಗುರಿ ಇದೆ. ಹರಳು ಬೆಳೆ ವಿಸ್ತರಣೆಗೆ ಒತ್ತು ಸಿಗಲಿದೆ. ನೀರಾವರಿ ಮತ್ತು ಮಳೆಯಾಶ್ರಿತ ಶೇಂಗಾದ ಇನ್ನಷ್ಟು ತಳಿಗಳನ್ನು ಪರಿಚಯಿಸ ಲಾಗುತ್ತಿದೆ.

ಡಾ.ಬಿ.ಮಂಜುನಾಥ್, ಜಂಟಿ ಕೃಷಿ ನಿರ್ದೇಶಕ ಚಿತ್ರದುರ್ಗ,

----