ಜಿಲ್ಲೆ

ದೇಸಿ ಕ್ರೀಡೆಯತ್ತ ಗಮನಹರಿಸಲಿ

ಅಥಣಿ ಗ್ರಾಮೀಣ: ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕವಾಗಿ ಶ್ರಮಿಸಬೇಕು ಎಂದು ವೇದಮೂರ್ತಿ ಗುರುಮೂರ್ತಯ್ಯ ಕಾಡದೇವರಮಠ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೊಕಟನೂರ ಕೇಂದ್ರಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ದೇಸಿ ಕ್ರೀಡೆಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಮುಖಂಡ ಸುಭಾಷ ಸೋನಕರ ಮಾತನಾಡಿ, ದೇಸಿ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕು. ಸೋಲು-ಗೆಲುವು ಲೆಕ್ಕಿಸದೇ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಪ್ರಚಾರ್ಯ ಅನಿಲ ಮೇಲಿನಕೇರಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾನಾಸಾಹೇಬ ವೀರಗೌಡ, ಪ್ರವೀಣ ತುಬಚಿ, ಸುರೇಶ ಪೂಜಾರಿ, ಸದಾಶಿವ ಮುದಕಣ್ಣವರ, ಮಹೇಶ ಕಾಡದೇವರಮಠ, ಬಾವುಸಾಹೇಬ ಭೋಸಲೆ, ಆನಂದ ಕುಲಕರ್ಣಿ, ಅಪ್ಪಾಸಾಹೇಬ ಮಾದರ, ಅನಂತಕುಮಾರ ಜ್ಯೋಶಿ, ಮಹಾಂತೇಶ ಐಹೊಳಿ, ಸತೀಶ ಸೋನಕರ ಇತರರು ಇದ್ದರು.