ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಉಒನ್ಯಾಸಕರನ್ನು ಎತ್ತಿನ ಬಂಡಿಯಲ್ಲಿ ಕರೆತರುತ್ತಿರುವುದು... 
ಜಿಲ್ಲೆ

ದೇಸಿ ಉಡುಪಿನೊಂದಿಗೆ ಸ್ವಾಗತ ಸಂಭ್ರಮ

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮಂಗಳವಾರ ಸಂಭ್ರಮ ಮನೆ ಮಾಡಿತ್ತು. ವಿದ್ಯಾರ್ಥಿಗಳು, ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ, ಎತ್ತಿನ ಬಂಡಿ, ಟಾಂಗಾದಲ್ಲಿ ವಿಭಾಗಕ್ಕೆ ಬರುವ ಮೂಲಕ ಸ್ವಾಗತ ಕಾರ್ಯಕ್ರಮಕ್ಕೆ ದೇಸಿ ಸ್ಪರ್ಷ ಮಾಡಿದರು.

ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಈ ವಿಭಿನ್ನ ಆಚರಣೆಯನ್ನು ಮಾಡಲಾಯಿತು. ವಿದ್ಯಾರ್ಥಿಗಳು ಇಳಕಲ್ ಸೀರೆ, ದೋತಿ, ಪೊಲೀಸ್ ಧಿರೀಸು, ರಾಜ ಪೋಷಾಕು, ಪೇಟ, ರುಮಾಲು ಧರಿಸಿ ಗಮನ ಸೆಳೆದರು.

ಕರೊನಾ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಉದ್ಯಾನದಲ್ಲೇ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿಗಳಿಂದ ನಾಟಕ, ನೃತ್ಯ ಪ್ರದರ್ಶನ ಮಾಡಲಾಯಿತು.

ಕುಲಪತಿ ಪ್ರೊ.ದಯಾನಂದ ಅಗಸರ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ವಿಜಯಕುಮಾರ, ಪ್ರಮುಖರಾದ ಪ್ರೊ.ಕೆ.ಸಿದ್ದಪ್ಪ, ಪ್ರೊ.ಕೆ.ಸಿದ್ದಪ್ಪ, ಡಾ.ಪ್ರಕಾಶ ಕರಿಅಜ್ಜಣ್ಣವರ, ಪ್ರೊ.ಆರ್ನಿ ಎಸ್ತಾ, ಡಾ.ಪ್ರಥ್ವಿರಾಜ ಇತರರಿದ್ದರು.