ಗೋಕಾಕ, ಬೆಳಗಾವಿ: ದೇಶಾಭಿವೃದ್ಧಿಯಲ್ಲಿ ಇಂಜಿನಿಯರ್ ಸೇವೆ ಅಮೂಲ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಇಲ್ಲಿನ ನಗರಸಭೆ ಸಮುದಾಯ ಭವನದಲ್ಲಿ ಗೋಕಾಕ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜನರಿಗೆ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ನಗರದ ಸೌಂದರ್ಯ ಹೆಚ್ಚಿಸುವಲ್ಲಿ ಇಂಜಿನಿಯರ್ ಪಾತ್ರ ಮಹತ್ವದ್ದಾಗಿದೆ. ಇಂಜಿನಿಯರ್‌ಗಳು ಸರ್ ಎಂ.ವಿಶ್ವೇಶ್ವರಯ್ಯ ಅವರ ತತ್ತ್ವ ಆದರ್ಶಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಸೇವೆ ನೀಡಬೇಕು ಎಂದರು.
ಪರಿಸರ ಅಭಿಯಂತ ಎಂ.ಎಚ್.ಗಜಾಕೋಶ ಮಾತನಾಡಿ, ಆಧುನಿಕ ತಾಂತ್ರಿಕ ಜೀವನಶೈಲಿಯಲ್ಲಿ ಇಂಜಿನಿಯರ್‌ಗಳು ಪರಿಸರ ರಕ್ಷಿಸಬೇಕಿದೆ. ಪರಿಸರ ರಕ್ಷಣೆಯಲ್ಲಿ ಇಂಜಿನಿಯರ್ ಪಾತ್ರ ದೊಡ್ಡದಿದ್ದು ಪರಿಸರವನ್ನು ಕಾಪಾಡುವ ಮೂಲಕ ಪ್ರಕೃತಿ ವಿಕೋಪಗಳಿಂದ ಜನರನ್ನು ರಕ್ಷಿಸಬೇಕಿದೆ ಎಂದರು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ ಪಾಟೀಲ, ಸ್ಟ್ರಕ್ಚರಲ್ ಇಂಜಿನಿಯರ್ ಚಿದಂಬರ ಶಾಸ್ತ್ರಿ, ಗೋಕಾಕ ಇಂಜಿನಿಯರ್ ಅಸೋಶಿಯೇಷನ್ ಅಧ್ಯಕ್ಷ ರವೀಂದ್ರ ಉತ್ತೂರ, ಕಾರ್ಯಾಧ್ಯಕ್ಷ ಚಿದಾನಂದ ದೇಮಶೆಟ್ಟಿ, ಕಿರಣ ಇಟ್ನಾಳ, ಗಂಗಾಧರ ಶಿಂದೂರಿ, ವಿಶ್ವನಾಥ ಮಾಸ್ತಿಹೊಳಿ ಇತರರು ಇದ್ದರು.
ಬೈಲಹೊಂಗಲ: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಸಾಧಿಸಬೇಕು ಎಂದು ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಹೇಳಿದರು. ಪಟ್ಟಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ 161ನೇ ಜನ್ಮದಿನ ಹಾಗೂ 55ನೇ ಇಂಜಿನಿಯರ್ಸ್ ದಿನಾಚಾರಣೆ ಅಂಗವಾಗಿ ಚನ್ನಮ್ಮ ಸಮಾಧಿ ಹತ್ತಿರ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಗುರುವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಜೀವನದುದ್ದಕ್ಕೂ ನಿಷ್ಠೆ ಮತ್ತು ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ ವಿಶ್ವೇಶ್ವರಯ್ಯ, ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಜನೋಪಯೋಗಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಜನಪ್ರಿಯತೆ ಗಳಿಸಿದ್ದಾರೆ ಎಂದರು. ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆ ಚನ್ನಮ್ಮ ಸಮಾಧಿಯಿಂದ ಹೊರಟು ರಾಯಣ್ಣ ವೃತ್ತ, ಬಸ್ ನಿಲ್ದಾಣ, ಇಂಚಲ ರಸ್ತೆ ಮಾರ್ಗವಾಗಿ ಪುರಸಭೆ ತಲುಪಿತು. ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಗಿರೀಶ ಹಲಸಗಿ, ಉಪಾಧ್ಯಕ್ಷ ಎಂ.ಎಲ್.ಪಾಟೀಲ, ಶಿವಶಂಕರ ತಟವಾಟಿ, ಬಸವರಾಜ ಬೆಲ್ಲದ, ಬಸವರಾಜ ಸುತಗಟ್ಟಿ, ದುಂಡಪ್ಪ ಬೆನಚಿನಮರ್ಡಿ, ವೀರೇಶ ಹೊಳೆಪ್ಪನವರ, ಮಹಾಂತೇಶ ಮೂಗಿ, ಎಂ.ಐ.ಗೋದಿ, ಸಿ.ಆರ್.ಹೊಸೂರ,
ಎಸ್.ಬಿ.ಬಿದರಗಡ್ಡಿ, ಂಡರೀನಾಥ ಮಾಳೊದೆ ಇದ್ದರು.