ಜಿಲ್ಲೆ

ದೇಶಾಭಿಮಾನ ಮೂಡಿಸಿದ ತಿಂಗಳ ಸೊಬಗು

ಎಸ್.ಎರ್ರಿಸ್ವಾಮಿ

ಬಳ್ಳಾರಿ : ನಗರದ ಸಾಂಸ್ಕ್ರತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿಯಿಂದ ನಡೆದ ತಿಂಗಳ ಸೊಬಗು ಸಾಂಸ್ಕ್ರತಿಕ ಕಾರ್ಯಕ್ರಮ ಜನರಲ್ಲಿ ದೇಶಾಭಿಮಾನ ಮೂಡಿಸಿತು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನೂ ಆಕರ್ಷಿಸಿತು. ದೇಶಭಕ್ತಿ ಗೀತೆಗಳ ಗಾಯನ ಮತ್ತು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಚಿಣ್ಣರ ಕಲಾನೃತ್ಯಕ್ಕೆ ಕಲಾಭಿಮಾನಿಗಳು ಚಪ್ಪಾಳೆಯ ಸುರಿಮಳೆಗೈದರು. ಬಳ್ಳಾರಿಯ ಮೂನ್ ವಾಕರ್ಸ್ ಸಾಂಸ್ಕೃತಿಕ ಕಲಾ ಸಂಘದ ದೇಶಭಕ್ತಿ ಗೀತೆಗಳ ಸಮೂಹ ನೃತ್ಯಕ್ಕೆ ಹಿರಿಯರು- ಕಿರಿಯರೆನ್ನದೇ ಪ್ರತಿಯೊಬ್ಬರು ದೇಶಾಭಿಮಾನದಲ್ಲಿ ಲೀನವಾದರು. ತಾಲೂಕಿನ ಶಂಕರಬಂಡೆ ಗ್ರಾಮದ ಪಿ.ಹೊನ್ನೂರ್‌ಸಾಬ್ ಮತ್ತು ಸಂಗಡಿಗರ ರಾಮಾಯಣ ಬಯಲಾಟ ಸನ್ನಿವೇಶಗಳನ್ನು ಪಾತ್ರಧಾರಿಗಳು ಕಲಾ ಪ್ರೇಕ್ಷಕರ ಕಣ್ಣಂಚಿನಲ್ಲಿ ಕಟ್ಟಿದಂತಹ ಅಭಿನಯ ಪಾತ್ರಗಳು ಭರಪೂರ ಮನರಂಜಿಸಿದವು.