ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಆವರಣದಲ್ಲಿ ಕೆಎಲ್​ಇ ಆಯುರ್​ ಔಷಧಾಲಯವನ್ನು ಡಾ. ಪ್ರಭಾಕರ ಕೋರೆ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು. ಡಾ. ಸುಹಾಸಕುಮಾರ ಶೆಟ್ಟಿ, ಡಾ. ಎಂ.ವಿ. ಜಾಲಿ, ಎಚ್​.ಬಿ. ರಾಜಶೇಖರ, ಡಾ. ವಿ.ಡಿ. ಪಾಟೀಲ, ಡಾ. ಎನ್​.ಎಸ್​. ಮಹಾಂತಶೆಟ್ಟಿ ಇತರರಿದ್ದರು. 
ಜಿಲ್ಲೆ

ದೇಶಾದ್ಯಂತ ಕೆಎಲ್​ಇ ಆಯುರ್​ ಔಷಧಾಲಯ ಕೆಎಲ್​ಇ ಆಯುರ್​ ಔಷಧಾಲಯ ಉದ್ಘಾಟನೆ

ಬೆಳಗಾವಿ : ಕೆಎಲ್​ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಫಾರ್ಮಾದಲ್ಲಿ 87 ವರ್ಷದಿಂದ ಆಯುರ್ವೇದ ಔಷಧ ಹಾಗೂ ಸಾಂಪ್ರದಾಯಿಕ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಒಳ್ಳೆಯ ಗುಣಮಟ್ಟದ ಆಯುರ್​ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಕ್ರಮಕೈಕೊಳ್ಳಲಾಗಿದೆ. ದೇಶಾದ್ಯಂತ ಕೆಎಲ್​ಇ ಆಯುರ್​ ಔಷಧಾಲಯಗಳನ್ನು ತೆರೆಯಲಾಗುತ್ತದೆ ಎಂದು ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಆವರಣದಲ್ಲಿ ಕೆಎಲ್​ಇ ಆಯುರ್​ ಔಷಧಾಲಯ (ಆಯುರ್ವೇದಿಕ ಫಾರ್ಮಾಸಿ) ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಅಲೋಪಥಿಗೆ ಹೆಚ್ಚು ಪ್ರಾಮುಖ್ಯ ನೀಡಿ ಭಾರತೀಯ ಸಾಂಪ್ರಾದಾಯಿಕ ಔಷಧ ಪದ್ಧತಿ ನಾಶಪಡಿಸಿದ್ದೇವೆ. ಅದನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಅದಕ್ಕಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುಷ್​ ಮಂತ್ರಾಲಯಕ್ಕೆ ಹೆಚ್ಚಿನ ಪ್ರಾಶಸ್ತ$್ಯ ನೀಡುತ್ತಿದ್ದಾರೆ. ಅಲೋಪಥಿಗೆ ಪರ್ಯಾಯವಾಗಿ ಹೊಮಿಯೋಪಥಿ ಬೆಳೆದಿದೆ. ಆದರೆ, ಆಯುರ್ವೇದ ಹಿಂದೆ ಬಿದ್ದಿದೆ. ಆದ್ದರಿಂದ ಆಯುರ್ವೇದಕ್ಕೆ ಹೆಚ್ಚಿನ ಪ್ರಾಶಸ್ತ$್ಯ ನೀಡುವುದಕ್ಕಾಗಿ ದೇಶದ್ಯಾಂತ ಕೆಎಲ್​ಇ ಆಯುರ್​ ಔಷಧಾಲಯ ತೆರೆಯಲಾಗುತ್ತಿದೆ ಎಂದರು.

1938ರಲ್ಲಿ ಪ್ರಾರಂಭಿಸಲಾದ ಆಯುರ್ವೇದ ಫಾರ್ಮಾಸಿಗಾಗಿ ಅವಶ್ಯವಿರುವ ಗಿಡಮೂಲಿಕೆಗಳನ್ನು ಬಂಬರಗಾ ಗ್ರಾಮದ ಸುಮಾರು 16 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅದೇ ಪ್ರದೇಶದಲ್ಲಿ ಬೃಹತ್ತಾದ ಆಯುರ್​ ಫಾರ್ಮಾ ಹಾಗೂ ಸಂಶೋಧನಾ ಕೇಂದ್ರ ತಲೆ ಎತ್ತಲಿದೆ. ಪಶ್ಚಿಮ ಟ್ಟದಲ್ಲಿ ಬಹಳಷ್ಟು ಆಯುರ್ವೇದಿಕ್​ ಗಿಡಮೂಲಿಕೆಗಳಿದ್ದು, ಅವುಗಳ ಸಂಶೋಧನೆಗಾಗಿ ಕೆಎಲ್​ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದಿಕ್​ ಮಹಾವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ. ಅದರೊಂದಿಗೆ ಜತೆಗೂಡಿ ಆಯುರ್ವೇದ ಅಭಿವೃದ್ಧಿ ಹಾಗೂ ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ. ನಮ್ಮ ಪಾರಂಪರಿಕ ಔಷಧ ಪದ್ಧ್ದತಿಗೂ ಕೂಡ ಮಹತ್ವ ನೀಡಬೇಕು ಎಂದರು.

ಬಿ.ಎಂ. ಕಂಕಣವಾಡಿ ಆಯುರ್ವೇದಿಕ್​ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಹಾಸಕುಮಾರ ಶೆಟ್ಟಿ ಮಾತನಾಡಿ, ಕೆಎಲ್​ಇ ಆಯುರ್​ ಫಾರ್ಮಾದಲ್ಲಿ 326 ಬಗೆಯ ಔಷಧ ತಯಾರಿಸುತ್ತಿದ್ದು, ಅದರಲ್ಲಿ 26 ಸಾಂಪ್ರದಾಯಿಕ ರೋಗ ತಡೆಗಟ್ಟುವ ಆಯುರ್ವೇದ ಪದ್ಧತಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಉತ್ಪನ್ನಗಳನ್ನು ಮಾರಲು ಮೊದಲು ಆಯುಷ್​ ಪ್ರಮಾಣೀಕೃತ ಪ್ರಯೋಗಾಲಯದಲ್ಲಿ ಪರೀೆಗೊಳಪಡಿಸಲಾಗುತ್ತದೆ. ಉತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿ ಖಾತ್ರಿಪಡಿಸಿ ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ. ಹರ್ಬಲ್​ ಚಹಾ (ಟೀ) ಚವನಪ್ರಾಶ, ಸುವರ್ಣಬಿಂದು ಪ್ರಾಶಣ, ಕಾಸ್ಟ್ಟ್​ಧೂಪ, ಹಲ್ಲಿನ ಪುಡಿ, ಭೃಂಗರಾಜ ಎಣ್ಣೆ, ದುಗ್ದವರ್ಧಿನಿ ಸೇರಿ ಅನೇಕ ಆಯುರ್ವೇದ ಔಷಧ ಮಾರುಕಟ್ಟೆಯಲ್ಲಿ ಲಭ್ಯ ಇವೆ ಎಂದರು.

ಆಸ್ಪತ್ರೆ ವೈದ್ಯಕಿಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಎಚ್​.ಬಿ. ರಾಜಶೇಖರ, ಡಾ. ವಿ.ಡಿ. ಪಾಟೀಲ, ಡಾ. ಎನ್​.ಎಸ್​. ಮಹಾಂತಶೆಟ್ಟಿ, ಡಾ. ಆರೀಫ್​ ಮಾಲ್ದಾರ, ಡಾ. ಸುನೀಲ ಜಲಾಲಪುರೆ, ಡಾ. ಪಿ.ಜಿ. ಜಾಡರ, ಡಾ. ಸವಿತಾ ಭೊಸಲೆ ಇತರರಿದ್ದರು.