ಜಿಲ್ಲೆ

ದೇಶವಳ್ಳಿ ಗ್ರಾಮದಲ್ಲಿ ಬೈಕ್ ಕಳವು

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ದೇಶವಳ್ಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳರು ಬೈಕ್‌ವೊಂದನ್ನು ಕಳ್ಳತನ ಮಾಡಿದ್ದಾರೆ.

ಗ್ರಾಮದ ಮಹೇಶ್ ನಾಯಕ ಎಂಬುವವರು ಗುರುವಾರ ರಾತ್ರಿ ಪಲ್ಸರ್ ಎನ್‌ಎಸ್ ಬೈಕ್ ಅನ್ನು ಮನೆಮುಂದೆ ನಿಲ್ಲಿಸಿದ್ದರು. ಶುಕ್ರವಾರ ಮುಂಜಾನೆ ಕೆಲಸಕ್ಕೆ ಹೋಗಲು ಮನೆ ಹೊರಗೆ ಬಂದಾಗ ಬೈಕ್ ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹೇಶ್ ನಾಯಕ ಅವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.