ಬೆಳಗಾವಿ ನಗರದ ಬಸವೇಶ್ವರ ವೃತ್ತದಲ್ಲಿರುವ ದತ್ತ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಸಂದೀಪ ದೇಶಪಾಂಡೆ, ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ ಇತರರಿದ್ದರು. 
ಜಿಲ್ಲೆ

ದೇಶದಲ್ಲಿ ಬಿಜೆಪಿಯಿಂದ ಅಭಿವೃದ್ಧಿ

ಬೆಳಗಾವಿ: ದೇಶದಲ್ಲಿ ಎರಡು ವಿಧದ ರಾಜಕೀಯವಿದ್ದು, ರಾಷ್ಟ್ರಭಕ್ತಿಗಾಗಿ ತಮ್ಮನ್ನೇ ತಾವು ಸಮರ್ಥಿಸಿಕೊಂಡವರ ಪಕ್ಷ ಒಂದು ಕಡೆಯಾದರೆ. ತಮ್ಮ ಸ್ವಾರ್ಥ ಸಾಧನೆಗಾಗಿ ದೇಶವನ್ನು ಇಬ್ಭಾಗ ಮಾಡಿದ ಪಕ್ಷ ಇನ್ನೊಂದು ಕಡೆ ಇದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ವಾಗ್ದಾಳಿ ನಡೆಸಿದರು.

ಸ್ಥಳೀಯ ಪಕ್ಷದ ಕಚೇರಿಯಲ್ಲಿ 42ನೇ ಸಂಸ್ಥಾಪನಾ ದಿನದ ಅಂಗವಾಗಿ ಬುಧವಾರ ಜರುಗಿದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ವಿವಿಧ ದೇಶಗಳು ಭಾರತದತ್ತ ಮುಖ ಮಾಡಿವೆ ಎಂದರು. ಸಂದೀಪ ದೇಶಪಾಂಡೆ, ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಎಫ್.ಎಸ್. ಸಿದ್ದನಗೌಡರ, ಸಂಜಯ ಕಂಚಿ, ನೀತಿನ ಚೌಗಲೆ, ಸಂತೋಷ ದೇಶನೂರ, ವೀರಭದ್ರಯ್ಯ ಪೂಜಾರ, ಡಾ.ಸಂಜಯ ಕುಲಕರ್ಣಿ ಇದ್ದರು.

ಮಾಂಜರಿ ವರದಿ: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಬಿಜೆಪಿ ಮುಖಂಡ ಅಣ್ಣಾಸಾಹೇಬ ಯಾದವ, ದತ್ತ ಶೇತ್ಕರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮರ ಯಾದವ, ರಾಮಚಂದ್ರ ಭೋಸ್ಲೆ, ಮೋಹನ ಲೋಕರೆ, ಮನೋಹರ ಭೋಜಕರ, ಶ್ರೀಧರ ಭೋಜನಕರ, ಸನತಕುಮಾರ ಪಾಟೀಲ, ರಾಜುಗೌಡ ಪಾಟೀಲ, ಶಶಿಕಾಂತ ಪಾಟೋಳೆ, ಮಾಂಜರಿ ಗ್ರಾಪಂ ಸದಸ್ಯರಾದ ಶೀತಲ ಮುಗೆಣ್ಣವರ ಇದ್ದರು.