ಜಿಲ್ಲೆ

ದೇಶದಲ್ಲಿ ನಾರಿಶಕ್ತಿಗೆ ಬಹುದೊಡ್ಡ ಬಲ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನಾರಿ ಶಕ್ತಿಗೆ ಪ್ರೋತ್ಸಾಹಿಸುತ್ತಿದ್ದು, ಹೊಸ ಸಂಸತ್ ಉದ್ಘಾಟಿಸಿದ್ದು, ವಿಶೇಷ ಅನುದಾನ ಕರೆದು ಮಹಿಳಾ ಮೀಸಲು ಶೇ.೩೩ ನೀಡುವ ಐತಿಹಾಸಕ ನಿರ್ಧಾರ ಕೈಗೊಂಡರು. ದಲಿತ ಮಹಿಳೆ ರಾಷ್ಟಪತಿಯಾಗಿದ್ದು, ದೇಶದ ಕಟ್ಟಕಡೆಯ ಮಹಿಳೆಗೆ ಅಭಿವೃದ್ಧಿ ಫಲ ದೊರೆತರೆ ನಾರಿಶಕ್ತಿಗೆ ಬಲ ಬರುತ್ತದೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.

ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಅಂತಾರಾಷ್ಟಿçÃಯ ಮಹಿಳಾ ದಿನದ ನಿಮಿತ್ತ ಸೋಮವಾರ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕೇಂದ್ರೀಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಮಹಿಳಾ ಉದ್ಯಮಿಗಳ ಹೂಡಿಕೆ ಕುರಿತ ಒಂದು ದಿನದ ರಾಷ್ಟçಮಟ್ಟದ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಗ್ಯಾನ್ ಗರೀಬ್, ಯುವ, ಅನ್ನದಾತ, ನಾರಿಶಕ್ತಿ' ನಾಲ್ಕು ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ದೇಶದ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಜೀವನದಲ್ಲಿ ಏಳಿಗೆಗೆ ತಾಯಿ ಕಾರಣ. ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದ್ದು ತಾಯಿ. ಅವಳ ತ್ಯಾಗದಿಂದ ನಾವು ಉನ್ನತ ಸ್ಥಾನದಲ್ಲಿ ಕುರುವಂತಾಗಿದೆ. ನಾರಿ ಶಕ್ತಿ ಬಗ್ಗೆ ಅಭಿಮಾನ ಮತ್ತು ಗೌರವ ಇರಬೇಕು ಎಂದು ಹೇಳಿದರು. ಕೇಂದ್ರೀಯ ವಿವಿ ಉಪಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಸುಶಿಕ್ಷಿತ ಮಹಿಳೆ ಇಡೀ ಕುಟುಂಬ ಆಸ್ತಿ. ಆದ್ದರಿಂದ ಪ್ರಧಾನಿಯವರುಬೇಟಿ ಪಡಾವೋ, ಬೇಟಿ ಬಚಾವೋ' ಘೋಷಿಸಿದರು. ಮಹಿಳೆಯರನ್ನು ನಾವು ದೇವರ ರೂಪದಲ್ಲಿ ಕಾಣುತ್ತೇವೆ. ೨೦೨೯ರಲ್ಲಿ ರಾಜಕೀಯದಲ್ಲೂ ಮಹಿಳಾ ಮೀಸಲು ಶೇ.೩೩ ದೊರೆಯಲಿದ್ದು, ಅದರಿಂದ ಸೀ ಸ್ವಾವಲಂಬನೆಗೆ ಹೆಚ್ಚಿನ ಶಕ್ತಿ ಬರಲಿದೆ ಎಂದರು.

ಕೆಕೆಸಿಸಿಐ ಅಧ್ಯ ಶಶಿಕಾಂತ ಪಾಟೀಲ್ ಮಾತನಾಡಿದರು. ಕೆಕೆಸಿಸಿಐ ಕಾರ್ಯದರ್ಶಿ ಮಂಜುನಾಥ್ ಜೇವರ್ಗಿ ಸ್ವಾಗತಿಸಿದರು.
ವ್ಯವಹಾರ ಅಧ್ಯಯಬ ವಿಭಾಗದ ಡೀನ್ ಡಾ.ಮೊಹಮ್ಮದ್ ಜೋಹೇರ್ ಪ್ರಾಸ್ತಾವಿಕ ಮಾತನಾಡಿದರು. ಸ್ಕೂಲ್ ಆï ಬಿಸಿನೆಸ್ ಸ್ಟಡಿ ಡೀನ್ ಪ್ರೊ.ಪುಷ್ಪಾ ಎಂ. ಸವದತ್ತಿ, ಮಹಿಳಾ ಉದ್ಯಮಿ ಮುಕ್ತಾ ಆರ್. ಜೇಗರಕಲ್, ಚಂದನಬಾಲಾ ಸೇಥಿಯಾ, ಶಿವಕುಮಾರ ಬೆಳ್ಳಿಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ಅನುಶ್ರೀ ಲಾಹೋಠಿ, ಡಾ.ಸುಷ್ಮಾ, ಉತ್ತಮ ಬಜಾಜï, ಗಣಪತಿ ಸಿನ್ನೂರ, ಸಂಗಮೇಶ ಕಲ್ಯಾಣಿ, ಮಹಾದೇವ ಖೇಣಿ, ರಾಮಕೃಷ್ಣ ಇತರರಿದ್ದರು.