ಬಾಗಲಕೋಟೆ: ಮಹಾತ್ಮಾ ಗಾಂಧಿಜಿ ಅವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಽವೇಶನದ ಅಧ್ಯಕ್ಷತೆ ವಹಿಸಿ ೧೦೦ ವರ್ಷ ಕಳೆದಿರುವ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್ ಪಕ್ಷದಿಂದ ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಎಐಸಿಸಿಯಿಂದ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ೫೦೦ ಕ್ಕೂ ಹೆಚ್ಚು ಪ್ರತಿನಿಧಿಗಳು ಬೆಳಗಾವಿಗೆ ಆಗಮಿಸಲಿದ್ದಾರೆ. ರಾಜ್ಯದ ಸಿಎಂ, ಡಿಸಿಎಂ ಸೇರಿ ಅನೇಕ ಮುಖಂಡರು ಇರುವರು ಎಂದರು.
ಇವತ್ತು ದೇಶದಲ್ಲಿ ಮಹಾತ್ಮಾ ಗಾಂಧೀಜಿ ಕಡೆ ಇದ್ದಾರೆ, ಮತ್ತೊಂದು ಕಡೆಗೆ ಗೋಡ್ಸೆವಾದಿಗಳು ಇದ್ದಾರೆ. ಇವರನ್ನು ಹಾಗೆಯೇ ಬಿಟ್ಟರೆ ದೇಶಕ್ಕೆ ಗಂಡಾAತರ ಎನ್ನುವ ಭಾವನೆ ಇದೆ. ಇವರನ್ನು ಹತ್ತಿಕ್ಕದಿದ್ದರೆ ಮುಂದಿನ ದಿನಗಳು ಕಷ್ಟ ಆಗಲಿವೆ. ಹೀಗಾಗಿ ದೇಶದಲ್ಲಿ ಹೆಚ್ಚೆಚ್ಚು ಗಾಂಧೀಜಿ ಅವರ ಸತ್ಯ ಸಂದೇಶಗಳನ್ನು ಪ್ರಚೂರ ಪಡಿಸಬೇಕಿದೆ ಎಂದು ತಿಳಿಸಿದರು.
ಬಸವಣ್ಣ, ಅಂಬೇಡ್ಕರ್ ಗಾಂಧೀಜಿ ಅಂತವರು ಸರ್ವಜಾತಿಗಳ ಏಳಿಗೆ ಬಯಸಿ, ಎಲ್ಲರಲ್ಲೂ ಪ್ರೀತಿ, ಸೌಹರ್ದತೆ ತುಂಬುವ ಕೆಲಸ ಮಾಡಿದ್ದಾರೆ. ಅವರ ತತ್ವ ಸಂದೇಶಗಳು ಜನರಿಗೆ ಹೆಚ್ಚೆಚ್ಚು ಮುಟ್ಟಿಸುವ ಕೆಲಸ ಆಗಬೇಕಿದೆ. ಒಂದು ಕಡೆಯಾದರೆ ಮತ್ತೊಂದು ಕಡೆಗೆ ಎಲ್ಲವನ್ನು ಹತ್ತಿಕ್ಕಿ ಮನುವಾದ ತರಬೇಕು. ಬಡವ-ಶ್ರೀಮಂತ, ಧರ್ಮ, ಧರ್ಮಗಳ ಮಧ್ಯ ಸಂಘರ್ಷ ಆಗಬೇಕು ಎನ್ನುವ ಮನೋಭಾವದವರು ಇದ್ದಾರೆ. ಇಂಥ ಸಂದರ್ಭದಲ್ಲಿ ಗಾಂಧಿವಾದವನ್ನು ದೇಶಕ್ಕೆ ಕೊಡಬೇಕಿದೆ. ಆ ನಿಟ್ಟಿನಲ್ಲಿ ಬೆಳಗಾವಿ ಸಮಾವೇಶ ಸಂದೇಶ ಸಾರಲಿದೆ ಎಂದರು.