ಕಾನಹೊಸಹಳ್ಳಿ: ಕಿತ್ತೂರು ರಾಣಿ ಚನ್ನಮ್ಮ ಅವರ ಸ್ವಾತಂತ್ರ್ಯ ಹೋರಾಟದ ರೋಚಕವನ್ನು ಕಥನ, ಕಾವ್ಯಗಳು ಸಾರುತ್ತವೆ. ಇದರಿಂದಾಗಿ ರಾಣಿ ಚನ್ನಮ್ಮ ಅವರು ಜನಸಮೂಹದ ನಡುವೆ ಜೀವಂತವಾಗಿ ಇದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಹೇಳಿದರು.
ಗ್ರಾಮದ ಚನ್ನಮ್ಮ ವೃತ್ತದಲ್ಲಿ ಯುವಕರ ಬಳಗದಿಂದ ಆಯೋಜಿಸಿದ್ದ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ನಡೆದ ಮಾತನಾಡಿದರು. ಕಿತ್ತೂರು ಚನ್ನಮ್ಮ ಅವರು ಸಂಸ್ಥಾನದ ಉಳಿವಿಗಲ್ಲ ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದರು. ಬ್ರಿಟಿಷರು ಜಾರಿಗೆ ತಂದಿದ್ದ ಕಾನೂನು ಮಾರಕವಾಗಿದ್ದರ ಪರಿಣಾಮ ಜನರ ಹಿತಕ್ಕಾಗಿ ಹೋರಾಟ ನಡೆಸಿದರು. ಈ ಕುರಿತು ಧ್ವನಿ ಎತ್ತಿದ ನಾಡಿನ ಮೊದಲ ಮಹಿಳೆಯಾಗಿದ್ದಾರೆ. ಕಿತ್ತೂರು ಸಂಸ್ಥಾನ ಉಳಿಸಿಕೊಳ್ಳಬೇಕೆಂಬ ಹಂಬಲವಿದ್ದರೆ ಹೋರಾಟ ಮಾಡುವ ಅಗತ್ಯವಿರಲಿಲ್ಲ. ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ಸಾಕಿತ್ತು ಎಂದರು.
ಕಾನಾಮಡಗು ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು, ಜಿಪಂ ಮಾಜಿ ಸದಸ್ಯ ಎಚ್.ರೇವಣ್ಣ, ಜಿಲ್ಲಾ ಪಂಚಮಸಾಲಿ ಯುವ ಘಟಕದ ಆಧ್ಯಕ್ಷ ಕಿಚಿಡಿ ಕೊಟ್ರೇಶ್, ತಾಲೂಕು ಅಧ್ಯಕ್ಷ ಮಂಜುನಾಥ, ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಎಚ್.ಬಿ.ಸತೀಶ್, ಎನ್.ಜಿ.ರಮೇಶ್ ಗೌಡ, ಕೂಡ್ಲಿಗಿ ಮಲ್ಲಿಕಾರ್ಜುನ್, ಜುಟ್ಟಲಿಂಗನಹಟ್ಟಿ ಬೋಮಣ್ಣ, ಪಿಗ್ಮಿ ರಮೇಶ್, ಸೂರ್ಯ ಪ್ರಕಾಶ್, ಶಿವಕುಮಾರ್, ಸುನಿಲ್ ಗೌಡ, ಹುಲಿಕೆರೆ ಗೀತಾ, ಹುರುಳಿಹಾಳ್ ರೇಖಾ ಮಲ್ಲಿಕಾರ್ಜುನ್, ಮೆಡಿಕಲ್ ಮಂಜುನಾಥ್, ಎಳನೀರು ಮಂಜಣ್ಣ, ಕೆ.ಎಂ.ಹರ್ಷವರ್ಧನ, ಎಂ.ಬಿ.ಅಯ್ಯನಹಳ್ಳಿ ಅರುಣಕುಮಾರ್, ಕೆ.ಸಿದ್ದನಗೌಡ್ರು, ರಮೇಶ, ಎಚ್.ಜಗದೀಶ್ , ಸಿದ್ದನಗೌಡ, ಕಲ್ಲೇಶ್, ವಿಜಯ್, ನಾಗರಾಜ್, ವಿಜಯಕುಮಾರ್, ರೇವಣ್ಣ. ಪಿ, ವಿಜಯನಂದ, ಚಂದ್ರಗೌಡ, ಮಂಜುನಾಥ್ ಎಚ್.ಎ. ನಾಗೇಶ್, ಸಿದ್ದೇಶ್, ಕೆ. ಲೋಕೇಶ್, ಅಜಯ್, ಕೆ.ರಾಕೇಶ್ ಇದ್ದರು.