ಕಲಬುರಗಿ: ದೇಶದ ಇಂದಿನ ಸ್ಥಿತಿ-ಗತಿಯನ್ನು ಸೂಕ್ಷವಾಗಿ ಅವಲೋಕಿಸಿ ಅದನ್ನು ಸುಧಾರಿಸುವ ಹೊಣೆಯು ಯುವಶಕ್ತಿಯ ಮೇಲಿದೆ ಎಂದು ವಿಜಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ಮಹೇಶ ಗಂವ್ಹಾರ ಹೇಳಿದರು.
ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್.ಇರಾಣಿ ಪದವಿ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ ರಾಷ್ಟಿಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಶನಿವಾರ ಉಪನ್ಯಾಸ ನೀಡಿ, ನಾವು ಎಲ್ಲದಕ್ಕೂ ಸರ್ಕಾರವನ್ನು ಜವಾಬ್ದಾರಿಯನ್ನಾಗಿಸುವುದನ್ನು ಬಿಟ್ಟು ಬಿಡಬೇಕು. ನಮ್ಮ ಮೇಲಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿ ದೇಶದಲ್ಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಎನ್‌ಎಸ್‌ಎಸ್ ಸೇವಾ ಮನೋಭಾವನೆಯಿಂದ ಕೂಡಿದೆ. ವಿದ್ಯಾರ್ಥಿಗಳು ಇತರರಿಗೆ ಸೇವೆ ನೀಡುವಂತ ಕಾಯಕವನ್ನು ಮಾಡಬೇಕು. ದೇಶಭಕ್ತಿ, ರಾಷ್ಟಿಯತೆ ಮೈಗೂಡಿಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಜಯಶ್ರೀ ಬಡಿಗೇರ ವಹಿಸಿದ್ದರು. ರಾಸೇಯೋ ಕಾರ್ಯಕ್ರಮ ಅಧಿಕಾರಿ ಡಾ.ಪ್ರಾಣೇಶ ಎಂ., ಡಾ.ಶಂಕ್ರಪ್ಪ ಕಲಬುರ್ಗಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಬೋಧಕ,ಬೋಧಕೇತರ ಸಿಬ್ಬಂದಿ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು