ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಮಕ್ಕಳು ದೇಶದ ಸಂಸ್ಕೃತಿ, ಸಂಪತ್ತು, ಇತಿಹಾಸ. ಸಂವಿಧಾನ ಉಳಿಸಿ ಬೆಳೆಸಬೇಕು. ತಂದೆ-ತಾಯಿ, ಸ್ವಾತಂತ್ರ್ಯೋರಾಟಗಾರರು ಹಾಗೂ ದೇಶ ರಕ್ಷಣೆಯ ಹೊಣೆ ಹೊತ್ತಿರುವ ಯೋಧರನ್ನು ಗೌರವಿಸಬೇಕು ಎಂದು ಲೆಪ್ಟಿನೆಂಟ್ ಕರ್ನಲ್ ಜಗದೀಶ ದಾನರೆಡ್ಡಿ ಕರೆ ನೀಡಿದರು.
ಹುಬ್ಬಳ್ಳಿ ಭವಾನಿನಗರ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಮರುಳಾರಾಧ್ಯ ಹಿರೇಮಠ, ಮುಖ್ಯಾಧ್ಯಾಪಕಿ ಅನಿತಾ ಬಾಗಲಕೋಟ ಇದ್ದರು. ಇಂದ್ರಜಿತ ರಂಜನ್ ಸ್ವಾಗತಿಸಿದರು. ಸುಮನ ಪುರೋಹಿತ ಅರುಷ ಕಟ್ಟಿಮನಿ ನಿರೂಪಿಸಿದರು. ಅಮೂಲ್ಯ ಕಬಾಡಿ ವಂದಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವ ನೃತ್ಯ ಪ್ರದರ್ಶಿಸಿದರು.