ನಾಗಠಾಣ ಗ್ರಾಮದ ನಾಡ ಕಚೇರಿ ಆವರಣದಲ್ಲಿ ಉಪತಹಸೀಲ್ದಾರ್ ಜಿ.ಪಿ. ಡೊಂಬಳೆ ಧ್ವಜಾರೋಹಣ ನೆರವೇರಿಸಿದರು. ಬಸವರಾಜ ಸಾರವಾಡ ಮತ್ತಿತರರಿದ್ದಾರೆ. 
ಜಿಲ್ಲೆ

ದೇಶದ ಸಂಸ್ಕೃತಿ ಉಳಿಸಲು ಬದ್ಧರಾಗೋಣ

ವಿಜಯಪುರ: ನಮ್ಮ ದೇಶದ ಸಂಸ್ಕೃತಿ ಉಳಿಸಲು ನಾವು ಸದಾ ಬದ್ಧವಾಗಿರಬೇಕು ಎಂದು ಉಪತಹಸೀಲ್ದಾರ್ ಜಿ.ಪಿ. ಡೊಂಬಳೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ನಾಡ ಕಚೇರಿಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ದೇಶ ಮುನ್ನಡೆಯಲು ಎಲ್ಲರಿಗೂ ಸಂವಿಧಾನ ಸಮಾನ ಹಕ್ಕು ನೀಡಿದೆ ಎಂದರು.

ಪತ್ರಕರ್ತ ಬಸವರಾಜ ಸಾರವಾಡ ಮಾತನಾಡಿ, ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆಯೋಣ ಎಂದರು.