??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ದೇಶದ ಭವಿಷ್ಯವೇ ಮಕ್ಕಳು

ಔರಾದ್: ದೇಶದ ಅಭಿವೃದ್ಧಿ ಮಕ್ಕಳ ಭವಿಷ್ಯದ ಮೇಲೆ ಅವಲಂಬಿತವಾಗಿದೆ ಎಂದು ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕಾಶೀನಾಥ ಪಾಟೀಲ್​ ಹೇಳಿದರು.

ಎಕಲಾರ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ದೇಶದ ಭವಿಷ್ಯ ರೂಪಿಸುವ ಮಕ್ಕಳನ್ನು ಸದೃಢಗೊಳಿಸಬೇಕು. ಆತ್ಮವಿಶ್ವಾಸದಿಂದ ನಿರಂತರ ಅಭ್ಯಾಸ ಮಾಡಬೇಕು. ಒಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಎಕಲಾರ ಶಾಲೆ ಮಕ್ಕಳ ಕ್ರಿಯಾಶೀಲತೆ ಕಂಡು ಶ್ಲಾಘನೀಯ ಎಂದರು.

ಉನ್ನತಿ ಟ್ರಸ್ಟ್ನ ಷಾ ಇಸ್ಮಾಯಿಲï ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಬೇಕು. ಇಲ್ಲಿನ ಶಿಕ್ಷಕರ ಪ್ರಯತ್ನ ಶ್ಲಾಘನೀಯ ಎಂದರು. ಮಕ್ಕಳು ಭಾಷಣ, ಗಾಯನ ಪ್ರಸ್ತುತ ಪಡಿಸಿದರು. ವಿವಿಧ ತರಗತಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಸಿಆರ್‌ಪಿ ಮಹಾದೇವ ಘುಳೆ, ಎಸ್‌ಡಿಎಂಸಿ ಸದಸ್ಯ ಶಿವಾನಂದ ಬಿರಾದಾರ, ಶಿಕ್ಷಕರಾದ ಬಾಲಾಜಿ ಅಮರವಾಡಿ, ಜೈಸಿಂಗ್ ಠಾಕೂರ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರೂಪಾ, ಸಿದ್ದೇಶ್ವರಿ, ಪ್ರಶಿಕ್ಷಣಾರ್ಥಿಗಳಾದ ರಾಣಿ, ನಿಖೀತಾ, ಅಂಬಿಕಾ, ನಾಗಜ್ಯೋತಿ ಇತರರಿದ್ದರು.