ಚಿಕ್ಕಮಗಳೂರು: ಶತಮಾನಗಳಷ್ಟು ಪುರಾತನ ಹಿನ್ನೆಲೆಯಿರುವ ಪ್ರಾಚೀನ ಭಾಷೆ ಕನ್ನಡಕ್ಕೆ ದೇಶದ ಬಹುತೇಕ ರಾಜ್ಯಗಳಲ್ಲಿ ಶಾಸನಗಳ ಕುರುಹುಗಳು ಪತ್ತೆಯಾಗಿವೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದರು.
ಆಂಧ್ರ ಪ್ರದೇಶದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕ್ಷೇತ್ರದ ಗುರುರಾಜ ಸಭಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲೆ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟç ಹಾಗೂ ಗೋವಾದ ಅಂತರರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಥಮ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಕರ್ನಾಟಕ, ಆಂಧ್ರ ಸೇರಿದಂತೆ ಅನೇಕ ರಾಜ ಮಹಾರಾಜರು, ಅರಸರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಗಡಿನಾಡು ಬಳ್ಳಾರಿ ಹಾಗೂ ಮಂತ್ರಾಲಯದ ಸುತ್ತಮುತ್ತಲು ಕನ್ನಡದ ಪ್ರೇಮವು ಅತಿ ಹೆಚ್ಚು ಪ್ರೀತಿಪಾತ್ರವಾಗಿ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ತುಂಗಭದ್ರ ನದಿ ಕರ್ನಾಟಕದಿಂದ ಆಂಧ್ರಪ್ರದೇಶದ ಕಡೆ ಸಾಗಿದಂತೆ, ಕನ್ನಡ ಭಾಷಾಭಿಮಾನವು ಆಂಧ್ರದಲ್ಲೂ ನೆಲೆಯೂರಲು ಸಾಧ್ಯವಾಗಿದೆ ಎಂದು ಹೇಳಿದರು.
ಇಂದಿಗೂ ಆಂಧ್ರಪ್ರದೇಶದ ರುದ್ರಭೂಮಿಯಲ್ಲಿ ಕನ್ನಡಕ್ಕೆ ಸಂಬAಧಪಟ್ಟ ಶಾಸನಗಳು ದೊರೆತಿವೆ. ಅದರಂತೆ ಕೇರಳ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕನ್ನಡದ ಭಾಷೆ ಒಳಗೊಂಡ ಕುರುಹುಗಳು ಸಿಕ್ಕಿರುವುದು ಗಮನಿಸಿದರೆ ಕನ್ನಡ ಪ್ರೀತಿ ಇಡೀ ದೇಶಾದ್ಯಂತ ಹಬ್ಬಿರುವುದು ದೃಢಪಟ್ಟಂತಾಗುತ್ತದೆ ಎಂದರು.
ಇAದಿಗೂ ಆಂಧ್ರಪ್ರದೇಶದ ಹಲವೆಡೆ ಸರ್ಕಾರಿ ಹುದ್ದೆ ಸೇರಿದಂತೆ ಜನಪ್ರತಿನಿಧಿಗಳಾಗಿ ಕನ್ನಡಿಗರು ತಮ್ಮದೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಆಂಧ್ರದ ಮುಖ್ಯಮಂತ್ರಿಗಳ ಕಾರ್ಯಾಲಯಗಳಲ್ಲಿ ಕನ್ನಡಿಗರು ಕೆಲಸವನ್ನು ನಿರ್ವಹಿಸುವ ಮೂಲಕ ಕನ್ನಡದ ಪ್ರೀತಿಯನ್ನು ಎಲ್ಲೆಡೆ ಬೆಳೆಸುತ್ತಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಶ್ರೀ ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಶ್ರೀಮಠದ ಗುರು ರಾಘವೇಂದ್ರ ಸ್ವಾಮಿಗಳು ತಮಿಳುನಾಡಿನಲ್ಲಿ ಜನಿಸಿದರು. ಆದರೆ ಕನ್ನಡವನ್ನು ಮಾತೃಭಾಷೆಯಾಗಿ ಅಳವಡಿಸಿಕೊಂಡು 'ಇಂದು ಎನಗೆ ಗೋವಿಂದ' ಎಂಬ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದರು. ಇದಾದ ಬಳಿಕ ತಮ್ಮ ಕಾರ್ಯ ವ್ಯಾಪ್ತಿಯನ್ನು ಆಂಧ್ರಪ್ರದೇಶದ ಮಣ್ಣಿನಲ್ಲಿ ನೆಲೆಕಂಡರು ಎಂದು ಹೇಳಿದರು.
ರಾಷ್ಟçದ ಹಲವಾರು ರಾಜ್ಯಗಳಲ್ಲಿ ಆಯಾಯ ಮಾತೃಭಾಷೆಗಳಿವೆ. ಅವುಗಳು ಕನ್ನಡಿಗರಿಗೆ ಚಿಕ್ಕಮ್ಮ ದೊಡ್ಡಮ್ಮನಂತೆ. ಕನ್ನಡ ತಾಯಿಭಾಷೆಯಾಗಿದ್ದು, ಹೆಚ್ಚಿನ ಬಾಂಧವ್ಯವನ್ನು ಕನ್ನಡಕ್ಕೆ ಕನ್ನಡಿಗರು ಕೊಡಬೇಕು ಎಂದು ತಿಳಿಸಿದರು.
ಶ್ರೀ ರಾಘವೇಂದ್ರ ಮಠದಲ್ಲಿ ಭಕಿ,್ತ ನಂಬಿಕೆ ಹಾಗೂ ಶ್ರದ್ಧೆಯಿಂದ ಬಂದವರಿಗೆ ಎಂದಿಗೂ ಸೋಲು ಬರುವುದಿಲ್ಲ, ಜೊತೆಗೆ ವಿದ್ಯಾಸಕ್ತಿಯಿಂದ ಬಂದ ವಿದ್ಯಾರ್ಥಿಗಳಿಗೆ ಗುರುಗಳ ಪರಂಪರೆ ಮಠದಲ್ಲಿ ಬೆಳದಿಂಗಳ ಬೆಳಕನ್ನು ತೋರಿದ ಕೀರ್ತಿ ಶ್ರೀ ರಾಘವೇಂದ್ರರರಿಗೆ ಸಲ್ಲುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಆಶಯ ನುಡಿಗಳನ್ನಾಡಿ, ಪಂಚರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ. ನಾಡು ಕಟ್ಟುವ ಕಾಯಕದಲ್ಲಿ ಕನ್ನಡಿಗರು ಕಾಯಕಲ್ಪದಡಿ, ಹೊಸ ಚಿಂತನೆಯಡಿ ವಿನೂತನವಾಗಿ ನಾಡಿನ ಭಾಷೆಯನ್ನು ಗಗನದೆತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ ಎಂದರು.
ಗೋವಾದ ಸಮುದ್ರದ ಮಧ್ಯದ ಹಡಗಿನಲ್ಲಿ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳುವ ಉz್ದೆÃಶವಿದೆ. ಈ ಮೂಲಕ ಟೀಕಾಕಾರರಿಗೆ ಕನ್ನಡ ಭಾಷೆ ಕಟ್ಟುವ ಮೂಲಕ ಸರಿಯಾದ ಉತ್ತರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಕನ್ನಡ ಸಿರಿ ಪ್ರಶಸ್ತಿಯು ಇದೇ ಚಿಕ್ಕಮಗಳೂರು ಜಿಲ್ಲೆಯಿಂದ ಆರಂಭಗೊAಡು ಗಡಿಯನ್ನು ದಾಟಿ ಆಂಧ್ರದಲ್ಲಿ ಕಾರ್ಯಕ್ರಮ ನಡೆಸಿ ಪ್ರಶಸ್ತಿ ವಿತರಿಸುವ ಕಾರ್ಯ ಮಾಡಲಾಗಿದೆ ಎಂದರು.
ಸಮ್ಮೇಳನ ಅಧ್ಯಕ್ಷ ಡಾ. ಪ್ರದೀಪ್ ಕುಮಾರ್ ಹೆಬ್ರಿ ಮಾತನಾಡಿ, ಗಡಿನಾಡ ಕನ್ನಡ ಶಾಲೆಗಳು, ಸಂಘಟನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರದಿಂದ ವಿಶೇಷ ನೆರವು ಮತ್ತು ಆದ್ಯತೆ ನೀಡಬೇಕು. ಕಲಾವಿದರು, ಸಂಘಟಕರು ಹಾಗೂ ಶಿಕ್ಷಣ ಮಾರ್ಗದರ್ಶಿಗಳಿಗೆ ಗೌರವ ದೊರೆಯಬೇಕು ಎಂದು ಆಗ್ರಹಿಸಿದರು.
ಕನ್ನಡಿಗರು ಮಾತೃಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬದುಕುತ್ತಿರುವುದು ಅವರ ಕನ್ನಡದ ಪ್ರೀತಿ ಹಾಗೂ ಕನ್ನಡದ ಶಕ್ತಿಯ ಸಾಕ್ಷಿಯಾಗಿದೆ. ಅವರ ಹೋರಾಟಕ್ಕೆ ನಾವೆಲ್ಲರೂ ಧ್ವನಿ ಆಗಬೇಕು. ಆದ್ದರಿಂದ ಸರ್ಕಾರವು ಆ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಗೌರವ ಕಾರ್ಯದರ್ಶಿ ಡಾ. ಬಿ.ಎಂ ಪಟೇಲ್ ಪಾಂಡು, ತೆಲಂಗಾಣ ಘಟಕದ ಅಧ್ಯಕ್ಷ ಡಾ. ಗುಡಗುಂಟಿ ವಿಟ್ಟಲ್ ಜೋಶಿ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷಿö್ಮÃ, ನಗರಾಧ್ಯಕ್ಷ ಸಚಿನ್ ಸಿಂಗ್, ಕಸಾಪ ಮುಖಂಡರಾದ ಜಿ.ಟಿ.ಸುಬ್ರಹ್ಮಣ್ಯ, ಗಣೇಶ್ ಹೆಗಡೆ, ಕಿರಣ್ ಕುಮಾರ್ ಪಟೇಲ್ ಮತ್ತಿತರರಿದ್ದರು.