ಜಿಲ್ಲೆ

ದೇಶದ ಏಕೀಕರಣ ಸಾರುವ ಅಭಿಯಾನ

ಔರಾದ್: ನನ್ನ ದೇಶ, ನನ್ನ ಮಣ್ಣು' ಯೋಜನೆ ಭಾರತದ ನೆಲ ಮತ್ತು ಶೌರ್ಯದ ಏಕೀಕೃತ ಆಚರಣೆಯನ್ನು ಕಲ್ಪಿಸುತ್ತದೆ. ರಾಷ್ಟçದ ಸ್ವಾತಂತ್ರÈ ಮತ್ತು ಪ್ರಗತಿಯ ಪ್ರಯಾಣವನ್ನು ಸ್ಮರಿಸುತ್ತದೆ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಹೇಳಿದರು. ಪಟ್ಟಣದ ಪತ್ರಿಸ್ವಾಮಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜಿಪಂ ಬೀದರ್, ನೆಹರು ಯುವ ಕೇಂದ್ರ , ತಾಪಂ ಸಂಯುಕ್ತಾಶ್ರಯದಲ್ಲಿನನ್ನ ಮಣ್ಣು ನನ್ನ ದೇಶ' ಘೋಷವಾಕ್ಯದಡಿ ಮಂಗಳವಾರ ಹಮ್ಮಿಕೊಂಡ ಮಣ್ಣಿನ ಅಮೃತ ಕಳಶ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.
ಭೂಮಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಮತ್ತು ನಮ್ಮ ವೀರರನ್ನು ಗೌರವಿಸಬೇಕು. ಈ ಕಾರ್ಯಕ್ರಮ ರಾಷ್ಟಿçÃಯ ಹೆಮ್ಮೆಯ ಭಾವ ತುಂಬುತ್ತದೆ. ಭವಿಷ್ಯದ ಪೀಳಿಗೆಗೆ ಭಾರತದ ಪಾಲಿಸಬೇಕಾದ ಪರಂಪರೆ ರಕ್ಷಿಸಲು ಪ್ರೇರೇಪಿಸುತ್ತದೆ ಎಂದರು.
ಸಾಹಿತಿ ಸಂಜುಕುಮಾರ ಜುಮ್ಮಾ ಮಾತನಾಡಿ, ಯುವ ಜನತೆ ದೇಶದ ಪರ ಕೆಲಸ ಮಾಡಿ ಭಾರತ ಮಾತೆಯ ವೀರಪುತ್ರರು ಆಗಬೇಕು. ಸಮಾಜದಲ್ಲಿ ಮನುಷ್ಯರಿಗೆ ಎಷ್ಟು ದೇವರ ಮೇಲೆ ನಂಬಿಕೆ ಇದೆಯೊ ಅಷ್ಟೇ ಭಕ್ತಿ ದೇಶದ ಮೇಲೆ ಇರಬೇಕು ಎಂದರು.
ಅಮೃತ ಕಳಶವನ್ನು ಔರಾದ್‌ನಿಂದ ನವದೆಹಲಿಗೆ ತೆಗೆದುಕೊಂಡು ಹೋಗುತ್ತಿರುವ ಸಮಾಜ ಸೇವಕ ರತ್ನದೀಪ್ ಕಸ್ತೂರೆ ಅವರಿಗೆ ಹಸ್ತಾಂತರಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಬೀರೇಂದ್ರಸಿAಗ್ ಠಾಕೂರ, ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲ ಓಂಪ್ರಕಾಶ ದಡ್ಡೆ, ತಾಪಂ ಸಹಾಯಕ ನಿರ್ದೇಶಕ ಸುದೇಶಕುಮಾರ, ಬಿಇಒ ಮಕ್ಸೂದ್ ಅಹ್ಮದ್, ಪಿಎಸ್‌ಐ ಉಪೇಂದ್ರಕುಮಾರ, ಪ್ರಾಂಶುಪಾಲ ಅಖಿಲ್, ಧನಾಜಿ ರೋಡೆ, ಅನಿಲ ಹೆಡಗಾಪುರೆ, ಸಂತೋಷ ಪಾಟೀಲ್, ಚಂದ್ರಕಾAತ ಹಿಪ್ಪಳಗಾವೆ ಇತರರಿದ್ದರು.