ಜಿಲ್ಲೆ

ದೇಶದ ಏಕತೆಯ ಸಂಕೇತವಾಗಿ ಅಮೃತ ಉದ್ಯಾನ

ಬಾಗಲಕೋಟೆ: ನನ್ನ ಮಣ್ಣು ನನ್ನ ದೇಶದ ಅಭಿನಾಯದಡಿ ದೇಶದ್ಯಾಂತ ಮೃತ್ತಿಕೆ ಸಂಗ್ರಹಸಿ ದೇಶದ ಏಕತೆಗಾಗಿ ಅಮೃತ ಉದ್ಯಾನ ನಿರ್ಮಾಣಮಾಡಲಾಗುವುದು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ನನ್ನ ಮಣ್ಣು ನನ್ನ ದೇಶ ಅಭಿಯಾನದ ಸಮಾರೋಪದಲ್ಲಿ ಮೃತ್ತಿಗೆಯನ್ನು ಅಭಿಯಾನ ಸಂಚಾಲಕರಿಗೆ ಹಸ್ತಾಂತರಿಸಿ ಮಾತನಾಡಿದರು.

ಈಗಾಗಲೇ ದೇಶವು ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ, ಈವರೆಗೆ ಸುಮಾರು 2 ಲಕ್ಷದಷ್ಟು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿರುವ ಹುತಾತ್ಮರ ಸ್ಮರಣಾರ್ಥವಾಗಿ ಮೇರಿ ಮಾಟಿ ಮೇರಾ ದೇಶ್ ಎಂಬ ಅಭಿಯಾನದಡಿ. ದೇಶದ ಮೂಲೆ ಮೂಲೆಗಳಿಂದಲೂ ಮೃತ್ತಿಕೆ ಸಂಗ್ರಹಿಸಿ, ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪದಲ್ಲೇ ಆ ಮಣ್ಣಿನಲ್ಲಿ ಗಿಡಗಳನ್ನು ನೆಟ್ಟು “ಅಮೃತ್ ಉದ್ಯಾನ’ ನಿರ್ಮಿಸಲಾಗುವುದು. ಈ ಉದ್ಯಾನವು ಏಕ ಭಾರತ ಶ್ರೇಷ್ಠ ಭಾರತದ ಸಂಕೇತವಾಗಿ ಹೊರಹೊಮ್ಮಲಿದೆ. ಇಂಥ ಉದ್ಯಾನವನಕ್ಕೆ ಬಾಗಲಕೋಟೆಯ ಮಣ್ಣು ಸೇರುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಮತಕ್ಷೇತ್ರದಲ್ಲಿ ಈ ಅಭಿಯಾನದ ಸಂಚಾಲಕರಾದ ಸುರೇಶ ಮಜ್ಜಗಿ,ಆನಂದ ಕುಲಕರ್ಣಿ,ಬಸವರಾಜ ಪಾಟೀಲ ಯಮನೂರ ಕತ್ತಿ ಇವರುಗಳು ತಿಂಗಳ ಪರಿಯಂತರ ಕ್ಷೇತ್ರದ ತುಂಬೆಲ್ಲಾ ಸಾಗಿ ಅಭಿಯಾನವನ್ನು ಯಶಸ್ವಿಗೊಳಿಸಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ಇದಕ್ಕೂ ಮೊದಲು ಐತಿಹಾಸಿಕ ಬೀಳೂರು ಗುರುಬಸವಮಹಾಸ್ವಾಮಿಗಳ ದೇವಸ್ಥಾನದಿಂದ ಹೊಳೆ ಆಂಜನೇಯ ದೇವಸ್ಥಾನದ ವರೆಗೂ ಮೃತ್ತಿಕೆಯ ಭವ್ಯ ಮೇವರಣಿಗೆ ಜರುಗಿತು, ನಂತರ ಶಿವಾನಂಧ ಜೀನ್ ಆವರಣದಲ್ಲಿ ಅಭಿಯಾನದ ಸಂಚಾಲಕರಿಗೆ ಮೃತ್ತಿಕೆಯನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ವಿದಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ,ಬೆಳಗಾವಿ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ.ಮಲ್ಲೆಶ ವಿಜಾಪುರ,ಕಲ್ಲಪ್ಪ ಭಗವತಿ,ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ,ಶಶಿಕಲಾ ಮಜ್ಜಗಿ,ಶಿವಲೀಲಾ ಪಟ್ಟಣಶೇಟ್ಟಿ.ಶಿವಾನಮದ ಟವಳಿ,ಸಂಗಣ್ಣ ಕಲಾದಗಿ,ಬಸವರಾಜ ಹುನಗುಂದ,ಉಮೆಶ ಹಂಚಿನಾಳ,ಜಿಲ್ಲಾ ಮಧ್ಯಮ ವಕ್ತಾರ ಸತ್ಯನಾರಯಣ ಹೇಮಾದ್ರಿ, ಉಮೇಶ ಹಂಚಿನಾಳ.ಶ್ರೀಧರ ನಾಗರಬೇಟ್ಟ ಸೇರಿದಂತೆ ಅನೇಕರು ಬಾಗವಹಿಸಿದ್ದರು.