ಚಿತ್ರದುರ್ಗ: ಕಾರ್ಮಿಕರಲ್ಲಿ ಅಸಾಧಾರಣ ಶಕ್ತಿಯಿದೆ,ಚಿತ್ರದುರ್ಗದ ಐತಿಹಾಸಿಕ ಕೋಟೆ ನಿರ್ಮಾಣದಲ್ಲಿ ಕಾರ್ಮಿಕರ ಶ್ರಮ ಅಡಗಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು. ನ್ಯಾಷನಲ್ ಸೆಂಟರ್ ಫಾರ್ ಲೇಬರ್(ಎನ್‌ಸಿಎಲ್)ಸೇರ್ಪಡೆ,ಕರ್ನಾಟಕ ರಾಜ್ಯಕಟ್ಟಡ ಕಾರ್ಮಿಕರ ಕೇಂದ್ರ ಸಂಘ ಜಿಲ್ಲಾ ಶಾಖೆ ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಕೋಟೆ ಕಟ್ಟುವಾಗ ಬೃಹತ್ ಗಾತ್ರದ ಕಲ್ಲುಗಳನ್ನು ಕ್ರಮಬದ್ದವಾಗಿ ಜೋಡಿಸಿ ಗೋಡೆ ನಿರ್ಮಿಸಿರುವುದರ ಹಿಂದೆ ಕಾರ್ಮಿಕರ ಪರಿಶ್ರಮವಿದೆ.
ಭಾರತದ ಪ್ರಮುಖ ಕೋಟೆಗಳಲ್ಲಿ ಚಿತ್ರದುರ್ಗದ ಕೋಟೆ ಕೂಡ ಒಂದು. ಹೈದರಾಲಿ ಚಿತ್ರದುರ್ಗದ ಕೋಟೆಯನ್ನು ಮೆಚ್ಚಿಕೊಂ ಡಿದ್ದ. ಭರಮಣ್ಣನಾಯಕರು 20 ಕೆರೆಗಳನ್ನು ನಿರ್ಮಿಸಿರುವುದರ ಹಿಂದೆಯೂ ಕಾರ್ಮಿಕರ ಶ್ರಮವಿದೆ. ಯಾವ ಚಕ್ರವರ್ತಿಯಿಂದಲೂ ಇಂತಹ ಕೆಲಸ ಆಗಿಲ್ಲ ಎಂದ ಅವರು,ಕಾರ್ಮಿಕರ ಜೀವನ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ‌್ಯಕ್ರಮಗಳನ್ನು ಅನು ಷ್ಠಾನಗೊಳಿಸಬೇಕು. ದೇಶದ ಪ್ರಗತಿಯಲ್ಲಿ ಸೈನಿಕರು,ರೈತರು,ಕಾರ್ಮಿಕರ ಶ್ರಮ ಬಹಳ ಮುಖ್ಯವಾಗಿದೆ ಎಂದರು.
ಕೆಎಸ್‌ಸಿಡಬ್ಲ್ಯುಸಿಯು ರಾಜ್ಯಪ್ರಧಾನ ಕಾರ‌್ಯದರ್ಶಿ ಲೀಲಾವತಿ ಮಾತನಾಡಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವವರು ಕಾರ್ಮಿಕ ರು. ದೇಶ ಕಟ್ಟಿದ ಕಾರ್ಮಿಕರ ಪರಿಸ್ಥಿತಿ ಕಷ್ಟದಲ್ಲಿದೆ. ಮೂಲ ಸೌಲಭ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಹೋರಾಟ ಮಾಡಬೇಕಿದೆ. ನಲವತ್ತು ವರ್ಷಗಳಿಂದಲೂ ಎನ್‌ಸಿಎಲ್ ಕೆಲಸ ಮಾಡುತ್ತಿದೆ.
ರಾಜ್ಯ ಸರ್ಕಾರ 2007ರಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿದರೂ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಇನ್ನು ಹೋರಾಟ ನಡೆಸುತ್ತಿರುವು ದು ನೋವಿನ ಸಂಗತಿಯಾಗಿದೆ ಎಂದರು. ಕೆಎಸ್‌ಸಿಡಬ್ಲ್ಯುಸಿಯು ಜಿಲ್ಲಾಧ್ಯಕ್ಷ ವೈ.ಸತ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.ಗಣೇಶ್,ಪ್ರಸನ್ನಕುಮಾರ್, ಮಲ್ಲೇಶ್,ಶಿವಕುಮಾರ್,ಸಿದ್ದಲಿಂಗಪ್ಪ,ಪಿ.ಎಂ.ನಾಗರಾಜ್,ಎಂ.ಸಿ.ಮಚ್ಚೇಂದ್ರಪ್ಪ,ಎಂ.ಡಿ.ಶಫಿ ಇತರರು ಇದ್ದರು.