ದೇಶದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ
|ಉಪನ್ಯಾಸಕ ನಾಗರಾಜ ಕಾಳೆ ಅಭಿಪ್ರಾಯ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದ ಬೆಳವಣಿಗೆ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ ಎಂದು ನಗರದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ನಾಗರಾಜ ಕಾಳೆ ಅಭಿಪ್ರಾಯ ಪಟ್ಟರು.
ನಗರದ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಗುರು ವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಪರಂಪರೆಯಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ,ಪ್ರತಿಯೊಬ್ಬರು ಗುರುಗಳಿಗೆ ಗೌರವ ನೀಡಬೇಕು ಎಂದರು.
ಎಮಿನೆAಟ ಕೋಚಿಂಗ್ ಕ್ಲಾಸಿಸ್‌ನ ವಿದ್ಯಾರ್ಥಿಗಳಲ್ಲಿನ ಶಿಸ್ತು ,ಸಂಯಮ ,ಮತ್ತು ಶಿಕ್ಷಕರ ಗುಣಾತ್ಮಕ ಶಿಕ್ಷಣ ಮಾದರಿಯಾಗಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಕರ್ಜಗಿಮಠ ಮಾತನಾಡಿ ಗುರುವಿನ ಪಾದ ಹಿಡಿದರೆ ಸಾಲದು,ಗುರುವಿನ ಪದಗಳನ್ನು ಪಾಲಿಸುವುದು ಶಿಷ್ಯ ಧರ್ಮ .ಗುರುವಿನ ಸಲಹೆ,ಮಾರ್ಗದರ್ಶನ ಅಳವಡಿಸಿಕೊಂಡರೆ ಜೀವನದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂದರು.
ವಿಕಾಸ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಕೌಲಗಿ ಮಾತನಾಡಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಇದೇ ವೇಳೆ ನವೋದಯ ಮತ್ತು ಸೈನಿಕ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿಯನ್ನು ಸತ್ಕರಿಸಲಾಯಿತು.
ಸೋಮಶೇಖರ ಸೂಲಿಗಾವಿ,ಗುರುಸಿದ್ದಪ್ಪ ಕೌಲಗಿ,ಚನ್ನಬಸಪ್ಪ ಪಡಗನೂರ,ಭಾಗ್ಯಲಕ್ಷ್ಮಿ ಎಂ,ಸದಾನಂದ ಬಡ್ಡೂರ ಇತರರಿದ್ದರು.