ಚಿತ್ರದುರ್ಗ: ಬೋಧನೆ ಬದಲು ರಾಜಕಾರಣಕ್ಕೆ ಮುಂದಾಗಿರುವ ಶಿಕ್ಷಕರ ನಡೆ,ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ವಿಷಾದಿಸಿದರು.
ಸಂಸ್ಥೆಯ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಬಿಇಡಿ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪ ಡಿಸಿದ್ದ ‘ನೆನಪಿನ ಹೆಜ್ಜೆಗಳು’ಬೀಳ್ಕೊ ಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ,ಶಿಕ್ಷಕರು ವೃತ್ತಿ ಬದ್ಧತೆ ಮೆರೆಯಬೇಕಿದೆ. ಕಠಿಣ ಪರಿಶ್ರ ಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ಉಪಕಾರ ಸ್ಮರಣೆ ಇವತ್ತಿನ ಪೀಳಿಗೆಯಲ್ಲಿ ಕಡಿಮೆಯಾಗಿದೆ. ಉಪಕಾರ ಮಾಡಿದವರನ್ನು ಮ ರೆತರೆ ಅಂತಹ ಮನುಷ್ಯ ಏಳಿಗೆಯಾಗುವುದಿಲ್ಲ ಎಂದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಇ.ಭೈರಸಿದ್ದಪ್ಪ ಮಾತನಾಡಿ ಪ್ರತಿ ಕ್ಷೇತ್ರದಲ್ಲಿಂದು ಪೈಪೋ ಟಿ ಇದೆ.ಆದ್ದರಿಂದ ವಿದ್ಯಾರ್ಥಿಗಳಲ್ಲಿ ಗುರಿಯೆಡೆ ಸ್ಪಷ್ಟತೆ ಇರಬೇಕೆಂದರು. ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ‌್ಯ ಡಾ. ಬಿ.ಸಿ.ಅನಂತರಾಮು, ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಪಿ.ನಾಗಭೂಷಣ್‌ಶೆಟ್ಟಿ, ಆರ್.ಎಸ್.ರಾಜು, ಡಾ.ಜಿ.ಬಿ.ರಾಜಪ್ಪ,ವಿ.ಪ್ರ ಕಾಶ್,ಡಾ.ಬಿ.ಚಂದ್ರಪ್ಪ,ಗ್ರಂಥಪಾಲಕ ಸಿ.ಬಸವರಾಜು, ಸಹಾಯಕ ಪ್ರಾಧ್ಯಾಪಕ ಡಾ.ಲಿಂಗರಾಜ್ ಹಂಚಿನಮನಿ ಮತ್ತಿತರರು ಇದ್ದರು.