ಜಿಲ್ಲೆ

ದೇಶಕ್ಕೆ ಸ್ವತಂತ್ರ ಸೇನಾನಿಗಳ ಸೇವೆ ಅಮೋಘ

ಚಿಟಗುಪ್ಪ: ಸ್ವಾತಂತ್ರ ಸೇನಾನಿ, ಹೋರಾಟಗಾರ ನಿರ್ಣಾದ ಮಲ್ಲಶೆಟೆಪ್ಪ ಬುಳ್ಳಾ (ಸೊಪ್ಪಣ್ಣ) ಅವರ ಸೇವೆ ಅಮೋಘ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ನಿರ್ಣಾದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಾತಂತ್ರ ಹೋರಾಟಗಾರ ಮಲ್ಲಶೆಟ್ಟೆಪ್ಪ ಬುಳ್ಳಾ (ಸೊಪ್ಪಣ್ಣ) ಮೂರ್ತಿ ಅನಾವರಣ ಹಾಗೂ ಸ್ವಾತಂತ್ರ ವೀರರ ಉದ್ಯಾನವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಹೋರಾಟದ ಮಲ್ಲಶೆಟ್ಟೆಪ್ಪ ಅವರ ಕೊಡುಗೆ ಅಪಾರ. ಈ ಭಾಗದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸೊಪ್ಪಣ, ರಾಚ್ಚಪ್ಪ ಸಾದಾ ಮುತ್ತಂಗಿ, ವಿರುಪಾಕ್ಷ ಪಾಟೀಲ್​ ಬೇಮಳಖೇಡ ಸೇರಿದಂತೆ ಹಲವರು ಶ್ರಮಿಸಿದ್ದಾರೆ. ಎಲ್ಲರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.

ಆರ್ಯ ಸಮಾಜದ ಮುಖಂಡ ಸುಭಾಷ ಅಷ್ಟಿಕರ ಮಾತನಾಡಿ, ಹೈದರಾಬಾದ್ ಕರ್ನಾಟಕ ಭಾಗದ ಸ್ವಾತಂತ್ರಕ್ಕಾಗಿ ಶ್ರಮಿಸಿದವರಲ್ಲಿ ದಿ.ಮಲ್ಲಶೆಟ್ಟೆಪ್ಪ ಅಗ್ರಗಣ್ಯರು. ನಾನು ಅವರೊಂದಿಗೆ ಒಡನಾಟ ಹೊಂದಿದ್ದಾರೆ. ನಿರ್ಣಾದಲ್ಲಿ ಆರ್ಯ ಸಮಾಜ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಾವೆಲ್ಲರೂ ಜಾತಿ ಹೆಸರಲ್ಲಿ ಬಡಿದಾಡದೆ ಎಲ್ಲರೂ ಭಾರತ ಮಾತೆ ಮಕ್ಕಳೆಂದು ಜೀವಿಸಬೇಕು ಎಂದರು.

ಜೈಭಾರತ ಮಾತಾ ಸೇವಾ ಸಮಿತಿ ರಾಷ್ಟಿಯ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಜಹೀರಾಬಾದ್‌ನ ಶ್ರೀ ಡಾ.ಬಸವಲಿಂಗ ಅವಧೂತರು ಮೂರ್ತಿ ಉದ್ಘಾಟಿಸಿದರು. ಸೋಂತದ ಶ್ರೀ ಶಿವಕುಮಾರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಪ್ರಮುಖರಾದ ಸಂತೋಷಕುಮಾರ ಕೊಲಕುಂದಾ, ಸಿ.ಬುಚ್ವಪ್ಪ, ಗುರುನಾಥ ವಡ್ಡೆ, ನಾರಾಯಣರಾವ ಚಿದ್ರಿ, ಸುಭಾಷ ಖಾಶೆಂಪುರ, ಶಿವಪುತ್ರ ಸಾದಾ, ಶಂಕರರಾವ ಪಾಟೀಲ್ ಬನ್ನಳ್ಳಿ, ಶಿವರಾಜ ಹುಲಿ, ರಾಮಶೆಟ್ಟಿ ಪಾಟೀಲ್, ಪ್ರಭುರಾವ ಮಂಗಲಗಿ, ಡಾ.ಧರ್ಮವೀರ ಸೊಪ್ಪಣ್ಣ, ಶೋಭಾದೇವಿ, ಉಷಾದೇವಿ, ಶೋಭಾದೇವಿ, ಶಿವಕುಮಾರ ಪಾಟೀಲ್ ಬೇಮಳಖೇಡ, ಸಂತೋಷ ಬೇಳಕೇರಾ, ಡಾ.ವಿವೇಕ ಜಲಾದೆ, ಚನ್ನಬಸಪ್ಪ ಸೊಪ್ಪಣ್ಣ ಇತರರಿದ್ದರು.

ಕವಿತಾ ಸೊಪ್ಪಣ್ಣ ಸ್ವಾಗತಿಸಿದರು. ರಜನೀಶ ಸೊಪ್ಪಣ್ಣ ವಂದಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.