ಜಿಲ್ಲೆ

ದೇಶಕ್ಕೆ ಮೋದಿ ನೀಡಿದ್ದು ವಿಕಾಸವಾದ ರಾಜಕಿಯ

ಬಾಗಲಕೋಟೆ: ದೇಶದಲ್ಲಿ ಈ ಹಿಂದೆ ನಡೆಯುತ್ತಿದ್ದ ಜಾತಿ ಹಾಗೂ ಒಳ ಜಗಳದ ಸಂಸ್ಕೃತಿಯನ್ನು ನರೇಂದ್ರ ಮೋದಿಯವರು ಅಳಿಸಿದ್ದು, ವಿಕಾಸವಾದ ರಾಜಕೀಯ ನೀಡಿದ್ದಾರೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಲೋಕಸಭಾ ನಿಮಿತ್ಯ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತದಿಂದ ಶುಕ್ರವಾರ ಬೈರಮಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮೋದಿಯವರ ಅಧಿಕಾರಾವಧಿಯಲ್ಲಿ ಯಾವುದೇ ಜಾತಿ ಬೇದವಿಲ್ದದೆ ಎಲ್ಲರಿಗೂ ಒಂದೇ ನ್ಯಾ, ಒಂದೇ ಸೌಲಭ್ಯ ನೀಡಲಾಗುತ್ತಿದೆ, ಮೋದಿಯವರ ಹತ್ತು ವರ್ಷದಲ್ಲಿ ಹೊಸ ಯೋಜನೆಯೊಂದಿಗೆ ಮುಂದೆ ಸಾಗುತ್ತಿದ್ದಾರೆ, ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ೫ನೇ ಸ್ಥಾನದಲ್ಲಿದೆ, ಮೂರನೇ ಬಾರಿ ಮೋದಿ ಆಯ್ಕೆಯಾದರೆ ಮೂರನೇ ಆರ್ಥಿಕ ವ್ಯವಸ್ಥೆಗೆ ನಾವು ಬರಲಿದ್ದವೆ, ಸದ್ಯ ದೇಶದಲ್ಲಿ ಈಗ ಮೇಡ್ ಇನ್ ಇಂಡಿಯಾ ಪ್ರಕಾಶಿಸುತ್ತಿದೆ, ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿಸಲೂ ನಾವೂ ಕಂಕಣ ಬದ್ದರಾಗೋಣ ಎಂದರು.

ಸಭೆಯಲ್ಲಿ ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಕಲಾದಗಿ, ಸುರೇಶ ಕೋಣ್ಣೂರ, ವೆಂಕಟೇಶ ಬೇಳಕೊಪ್ಪ, ವೇಂಕಟೇಶ ಹಳ್ಳೂರ, ರಾಮಣ್ಣ ವಡ್ಡರಕಲ್, ಬಸವರಾಜ ಹೆರಕಲ್, ಮಹಾಂತಯ್ಯ ಪಾಪನಾಳಮಠ, ಸಂಗಣ್ಣ ಮಳಗಿಹಾಳ, ಯಂಕಣ್ಣ ಕೊವಳ್ಳಿ,ಯಂಕಣ್ಣ ಮೂಕಿ ಸೇರಿದಂತೆ ಅನೇಕರು ಇದ್ದರು.
ಬಿಜೆಪಿ ಸೇರಿದ ಕಾಂಗ್ರೇಸ್ಸ ಕಾರ್ಯಕರ್ತರು ಕಾಂಗ್ರೆಸ್ಸ ಕಾರ್ಯಕರ್ತರಾಗಿದ್ದ ಸಂಗಣ್ಣ ಹುಲಕಂಟಿ, ಸಿದ್ದಣ್ಣ ಕುರಿ, ಸಂಗಣ್ಣ ನಿಗರಿ, ಶೇಖಣ್ಣ ನಿಗರಿ, ಪ್ರಕಾಶ ನಿಗರಿ ಸಂದರ್ಭದಲ್ಲಿ ಕಾಂಗ್ರಸ್ಸ ಪಕ್ಷವನ್ನು ತೊರೆದು ಬಿಜೆಪಿ ಸೇರಿದರು.

ಹಳ್ಳೂರ, ಬೈರಮಟ್ಟಿ, ಚೌಡಾಪುರ, ಬೇವೂರ ಗ್ರಾಮದಲ್ಲಿ ಚುನಾವಣಾ ಸಭೆ ನಡೆಸಿ ಮತಯಾಚನೆ ಮಾಡಲಾಯಿತು.