ಜಿಲ್ಲೆ

ದೇಶಕ್ಕೆ ಡಾ.ಮುಖರ್ಜಿ ಕೊಡುಗೆ ಅಪಾರ

ಯಾದಗಿರಿ: ಡಾ.ಶ್ಯಾಮಪ್ರಸಾದ ಮುಖರ್ಜಿ ಅವರು ದೇಶಕ್ಕಾಗಿ ಹೋರಾಡಿ, ತಮ್ಮನ್ನು ತಾವು ರಾಷ್ಟçಕ್ಕೆ ಸಮರ್ಪಿಸಿಕೊಂಡ ಮಹಾನ್ ಚೇತನ. ನಮಗೆಲ್ಲರಿಗೂ ಅವರು ಪ್ರೇರಣಾದಾಯಕರು ಎಂದು ಬಿಜೆಪಿ ಜಿ¯್ಲÁಧ್ಯP್ಷÀ ಬಸವರಾಜ ವಿಭೂತಿಹಳ್ಳಿ ಹೇಳಿದರು.

ನಗರದ ಬಿಜೆಪಿ ಜಿ¯್ಲÁ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಖರ್ಜಿ ಅವರ ಬಲಿದಾನ ದಿನ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೫೧ರಲ್ಲಿ ಜನಸಂಘದ ಸ್ಥಾಪನೆಯಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಅವರ ಆದರ್ಶ ಮತ್ತು ಹೋರಾಟದ ಬದುಕು ನಮಗೆ ಪ್ರೇರಣೆ ಎಂದರು.

ಬಿಜೆಪಿ ನಾಯಕಿ ನಾಗರತ್ನ ಕುಪ್ಪಿ ಮಾತನಾಡಿ, ಡಾ.ಶಾಮಪ್ರಸಾದ ಮುರ್ಖಜಿ ಅವರ ಪ್ರಯತ್ನ ಫಲವಾಗಿ ೧೯೫೧ ಅ.೨೧ರಂದು ಭಾರತೀಯ ಜನಸಂಘ ಅಸ್ತಿತ್ವಕ್ಕೆ ಬಂತ್ತು. ದೇಶದ ಮೊದಲ ಚುನಾವಣೆ ೧೯೫೩ರಲ್ಲಿ ನಡೆದಾಗ ಜನಸಂಘದ ಪ್ರಥಮ ಅಧ್ಯP್ಷÀರೂ ಆಗಿದ್ದ ಅವರು, ದಕ್ಷಿಣ ಕೊಲ್ಕತ್ತಾ ಮತಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿ ಕಾಂಗ್ರೆಸ್ಸಿಗೆ ಪ್ರಬಲ ಪ್ರತಿಪP್ಷÀವಾಗಿ ಮತ್ತು ಸಮರ್ಥ ನಾಯಕರಾಗಿ ತಮ್ಮ ಚಾಪು ಸಂಸತ್ತಿನಲ್ಲಿ ಮಂಡಿಸಿದರು ಎಂದು ಹೇಳಿದರು.

ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಶಾಮï ಪ್ರಸಾದ ಮುಖರ್ಜಿ ಅವರು ತಮ್ಮ ಜೀವಿತದ ಕೊನೆಯ ೧೫ ತಿಂಗಳು ಅಖಂಡ ಭಾರತದ ಉಳಿವಿಗಾಗಿ ಹೋರಾಟ ಮಾಡಿದವರಲ್ಲಿ ಮೊದಲಿಗರು ಎಂದರು.

ಜಿ¯್ಲÁ ಪ್ರಧಾನ ಕಾರ್ಯದರ್ಶಿ ಗುರು ಕಾಮ, ಪರುಶುರಾಮ ಕುರಕುಂದಿ, ಮುಖಂಡರಾದ ದೇವೇಂದ್ರನಾಥ ನಾದ, ವೆಂಕಟರೆಡ್ಡಿ ತುಮಕೂರು, ಜಿ¯್ಲÁ ವಕ್ತಾರ ಹಣಮಂತ ಇಟಗಿ, ಜಿ¯್ಲÁ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರಿ, ಯುವ ಮೋರ್ಚಾ ಜಿ¯್ಲÁಧ್ಯP್ಷÀ ಶ್ರೀಧರ ಸಾಹುಕಾರ, ಗ್ರಾಮೀಣ ಮಂಡಲ ಅಧ್ಯP್ಷÀ ರಾಜಶೇಖರ ಕಾಡಂನೊರ, ನಗರ ಮಂಡಲ ಅಧ್ಯP್ಷÀ ಲಿಂಗಪ್ಪ ಹತ್ತಿಮನಿ, ನಾಗಪ್ಪ ಗಚ್ಚಿನಮನಿ, ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ,ಮೋನೇಶ ಬೆಳಿಗೇರಿ, ಲಕ್ಷಿö್ಮÃ ಪುತ್ರ ಮಾಲಿಪಾಟೀಲ, ಚಂದ್ರಕಲಾ ಕೀಲನಕೇರ,ಭೀಮಬಾಯಿ ಶೆಂಡಿಗಿ, ಮಲ್ಲು ಕೊಲಿವಾಡ್, ಚಂದ್ರಶೇಖರ ಕಡೆಸೂರ ಸೇರಿದಂತೆಯೇ ಇತರರಿದ್ದರು.