ಜಿಲ್ಲೆ

ದೇಶಕ್ಕೆ ಗಂಡಾಂತರಕಾರಿಯಾದ ಹಲಾಲ್, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅಭಿಮತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ದೇಶದ ಆರ್ಥಿಕತೆ ಹಾಗೂ ಸುರಕ್ಷತೆಗೆ ಹಲಾಲ್ ಗಂಡಾಂತರಕಾರಿಯಾಗಿದೆ. ಹಲಾಲ್ ಹೆಸರಲ್ಲಿ ಸಂಗ್ರಹವಾಗುವ ಹಣವು ರಾಷ್ಟ್ರ ಕಂಟಕ ಕೆಲಸಗಳಿಗೆ ಬಳಕೆಯಾಗುತ್ತಿದೆ. ಈ ಬಗ್ಗೆ ಹಿಂದು ಸಮಾಜ ಎಚ್ಚರಗೊಳ್ಳಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಮನವಿ ಮಾಡಿದರು.

ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಹಲಾಲ್ ಜಿಹಾದ್ ಪುಸ್ತಕ ಲೋಕಾರ್ಪಣೆಗೊಳಿಸಿ, ಅವರು ಮಾತನಾಡಿದರು.

ದೇಶದ ಭವಿಷ್ಯದ ದೃಷ್ಟಿಯಿಂದ ಹಾಗೂ ನಮ್ಮ ಆರ್ಥಿಕ ವ್ಯವಸ್ಥೆ ಉಳಿಯಬೇಕಾದರೆ ಹಲಾಲ್ ಪ್ರಮಾಣ ಪತ್ರ ಇರುವ ವಸ್ತುಗಳನ್ನು ದೂರ ಇಡಬೇಕು ಎಂದು ಸಲಹೆ ನೀಡಿದರು.

ಜಾತ್ರೆ, ಉತ್ಸವದಲ್ಲಿ ಪ್ರಾಣಿ ಬಲಿ ಕೊಡುವಾಗ ಪರಂಪರೆ ಹೆಸರಲ್ಲಿ ಕಲಾಲ್ ಸಮಾಜದವರು ಬೇರೆ ಸಮುದಾಯದವರಿಗೆ ಅವಕಾಶ ಕೊಡಬಾರದು. ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಡಾಂತರ ಎದುರಿಸುತ್ತೀರಿ ಎಂದು ಮುತಾಲಿಕ್ ಎಚ್ಚರಿಸಿದರು.

ಆರ್ಥ ವ್ಯವಸ್ಥೆ ನಿಯಂತ್ರಣ:

ಪುಸ್ತಕದ ಬಗ್ಗೆ ಮಾತನಾಡಿದ ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಅವರು, ಹಲಾಲ್ ಸರ್ಟಿಫಿಕೇಟ್ ಮೂಲಕ ಈ ದೇಶದ ಅರ್ಥವ್ಯವಸ್ಥೆ ನಿಯಂತ್ರಿಸುವ ಹುನ್ನಾರ ನಡೆಯುತ್ತಿದೆ ಎಂದರು.

ಮಾಂಸಕ್ಕೆ ಸೀಮಿತವಾಗಿದ್ದ ಹಲಾಲ್ ಅನ್ನು ಇಂದು ಸಸ್ಯಾಹಾರ, ಉತ್ಪಾದನೆ, ಟೂರಿಸಂ, ಆಸ್ಪತ್ರೆ ಹೀಗೆ ಎಲ್ಲ ಕ್ಷೇತ್ರಗಳಿಗೆ ನಮಗೆ ಗೊತ್ತಿಲ್ಲದಂತೆ ವಿಸ್ತರಿಸಿದ್ದಾರೆ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆ ಹಾಳಾಗಲಿದೆ ಎಂದು ದಾಖಲೆ ಸಮೇತ ವಿವರಿಸಿದರು.

ಹಿರಿಯ ವಕೀಲ ನಾರಾಯಣ ಯಾಜಿ ಮಾತನಾಡಿ, ದೇಶದ ಹಿಂದುಗಳು ಮಾತ್ರ ಸೆಕ್ಯುಲರಿಸಂ ಒಪು್ಪತ್ತಾರೆ. ಹಾಗಾದರೆ ಉಳಿದವರು ಹೇಗೆ ಜಾತ್ಯತೀತ ಎಂಬ ಪದಕ್ಕೆ ಗೌರವ ಕೊಟ್ಟಂತಾಗುತ್ತದೆ. ಸೆಕ್ಯುಲರಿಸಂ ಪದಕ್ಕೆ ಅರ್ಥ ಎಲ್ಲಿದೆ? ಎಂದು ಪ್ರಶ್ನಿಸಿದರು.

ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಸಂಭಾಜಿ ಕಲಾಲ್, ರಮೇಶ ಮಂಡಲಕರ, ಬಸವಂತಗೌಡ, ಅಶೋಕ ಬಿ. ಇತರರು ಇದ್ದರು.