ಜಿಲ್ಲೆ

ದೇಶಕ್ಕೆ ಒಕ್ಕಲಿಗರ ಕೊಡುಗೆ ಅಪಾರ

ಗೋಣಿಕೊಪ್ಪ: ರಾಜ್ಯದಲ್ಲಿ ಒಕ್ಕಲಿಗರ ಸಮಾಜ ಬಲಾಢ್ಯವಾಗಿ ಬೆಳೆದಿದ್ದು ಕೃಷಿಕರಾಗಿ, ಕ್ರೀಡಾಪಟುಗಳಾಗಿ, ಸೈನಿಕರಾಗಿ ಹಲವು ರಂಗಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ಶಾಸಕ ಪೊನ್ನಣ್ಣ ಅಭಿಪ್ರಾಯಪಟ್ಟರು.


ಗೋಣಿಕೊಪ್ಪ ಕಾಳಪ್ಪ ಕಾಲನಿಯ ವಿ.ಕೆ.ರಮೇಶ್ ಅವರ ಗದ್ದೆಯಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.


ಒಕ್ಕಲಿಗ ಸಮುದಾಯದ ದೇವೇಗೌಡರು ದೇಶದ ಪ್ರಧಾನಿಯಾಗಿದ್ದರು. ಹಲವು ಒಕ್ಕಲಿಗ ಮುಖ್ಯಮಂತ್ರಿ, ಸಚಿವ, ಶಾಸಕರನ್ನು ಸಮಾಜ ನೀಡಿರುವುದು ಹೆಮ್ಮೆಯ ವಿಚಾರ. ಕೊಡಗು ಜಿಲ್ಲೆಯಲ್ಲಿಯೂ ಒಕ್ಕಲಿಗ ಸಮುದಾಯದ ಶಾಸಕರು, ಕ್ರೀಡಾಪಟುಗಳು, ಸಾಧನೆ ಮಾಡಿದವರಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಪಾಲಿಸುವಂತಾಗಬೇಕು. ಕೆಸರು ಗದ್ದೆ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.


ಯುವ ವೇದಿಕೆ ಅಧ್ಯಕ್ಷ ರಘು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಚನಾ ಪೊನ್ನಣ್ಣ, ಡಾ.ಅರವಿಂದ್, ರಘುನಾಥ್ ಗೌಡ, ಬಾಲು, ವಿ.ಕೆ ರಮೇಶ್, ಲೋಹಿತ್‌ಗೌಡ, ವಿ.ಟಿ. ವಾಸು ಉಪಸ್ಥಿತರಿದ್ದರು.

ಗೋಣಿಕೊಪ್ಪ ಕಾಳಪ್ಪ ಕಾಲನಿಯ ವಿ.ಕೆ.ರಮೇಶ್ ಅವರ ಗದ್ದೆಯಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ರಘು, ಕಾಂಚನಾ ಪೊನ್ನಣ್ಣ ಮತ್ತಿತರರಿದ್ದರು.