filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.51342595, 0.20504166);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45; 
ಜಿಲ್ಲೆ

ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ ಫುಲೆ ದಂಪತಿಗಳು

ಚಾಮರಾಜನಗರ: ಭಾರತೀಯ ಸಮಾಜಕ್ಕೆ ಜ್ಯೋತಿ ಬಾಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಅನೇಕ ಮಹನೀಯರ ಸಾಲಿನಲ್ಲಿ ಸಾವಿತ್ರಿಬಾಯಿ ಫುಲೆ, ಜ್ಯೋತಿ ಬಾ ಫುಲೆ ದಂಪತಿಗಳನ್ನು ಗೌರವಿಸಲಾಗುತ್ತಿದೆ. ಕೆಲವೇ ಸಮಾಜದವರಿಗೆ ಶಿಕ್ಷಣ ದೊರೆಯುವ ಸಂದರ್ಭದಲ್ಲಿ ಹಲವಾರು ಸಂಕಷ್ಟಗಳನ್ನು ಅನುಭವಿಸಿ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೆ ಶಿಕ್ಷಣ ನೀಡಿದರು. ಸಮಾಜದ ಬದಲಾವಣೆಗೆ ಶಿಕ್ಷಣವೇ ಮೂಲ ಕಾರಣ ಎಂದು ಭಾವಿಸಿದ್ದ ಅವರು, ದೇಶಕ್ಕೆ ನೀಡಿದ ಕೊಡುಗೆಗಳನ್ನು ನಾವೆಲ್ಲರೂ ಸ್ಮರಣೆ ಮಾಡಬೇಕಿದೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಸಾವಿತ್ರಿಬಾಯಿ ುಲೆ ಅವರು ಮಹಿಳೆಯರಿಗೆ ಶಿಕ್ಷಣ ನೀಡುವುದರ ಜತೆಗೆ, ಸಾಮಾಜಿಕ ಮೌಢ್ಯಗಳಾದ ಸತಿ ಸಹಗಮನ ಪದ್ಧತಿ, ಬಾಲ್ಯವಿವಾಹ, ಸೀಯರ ಕೇಶ ಮುಂಡನ ಹಾಗೂ ಇನ್ನಿತರೆ ಮೌಢ್ಯದ ವಿರುದ್ಧ ಹೋರಾಟ ನಡೆಸಿದರು. ಈ ಕಾರಣಕ್ಕೆ ಇಡೀ ದೇಶದಾದ್ಯಂತ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ ಮಾತನಾಡಿ, ಶಾಸಕ ಪುಟ್ಟರಂಗಶೆಟ್ಟಿ ಅವರು ಶಿಕ್ಷಕ ಪ್ರೇಮಿ ರಾಜಕಾರಣಿಯಾಗಿದ್ದಾರೆ. ಗುರು ಭವನ ಕಾಮಗಾರಿಗೆ 5 ಲಕ್ಷ ರೂ, ಅನುದಾನವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.

ಈ ವೇಳೆ ಹಿರಿಯ ಉಪನ್ಯಾಸಕ ಡಾ.ಜಿ.ವಿ.ಹರಿಪ್ರಸಾದ್ ಶೈಕ್ಷಣಿಕ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ), ಡಯಟ್ ಪ್ರಾಂಶುಪಾಲ ಎಂ.ಕಾಶೀನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಹನುಮಂತ ಶೆಟ್ಟಿ, ಬಿಆರ್‌ಸಿ ರಾಜೀವ್, ಸಂಘದ ಪ್ರಧಾನ ಕಾರ್ಯದರ್ಶಿ ಸುಧಾ, ಖಜಾಂಚಿ ಕೃಷ್ಣಮೂರ್ತಿ, ನಿರ್ದೇಶಕರಾದ ಎಂ.ಡಿ.ಮಹದೇವಯ್ಯ, ಸಿದ್ದಲಿಂಗಮೂರ್ತಿ, ಮಹದೇವಸ್ವಾಮಿ, ಕಿರಣ್‌ರಾಜ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಹೇಶ್, ಚಿಕ್ಕ ಬಸವಯ್ಯ, ಶಬಾನಾ, ಕೆ.ಬಿ.ಮಹದೇವಮೂರ್ತಿ ಇತರರು ಉಪಸ್ಥಿತರಿದ್ದರು.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ:

ಶಿಕ್ಷಕಿಯರಾದ ಇಂದಿರಾ ಗಾಂಧಿ, ನೀಲಮ್ಮ, ನಾಗಲಕ್ಷ್ಮೀ, ಪುಟ್ಟವರಾದಿ, ಸಿಂತ್ಯಾ ವಲಿವೇರಾ ಹಾಗೂ ತಹಶೀನಾ ಬೇಗಂ. ಶಿಕ್ಷಕರಾದ ಬಸವಣ್ಣ, ನಾಗರಾಜು, ವಿರುಪಾಕ್ಷ, ಬಸವಣ್ಣ, ಪುಟ್ಟಸ್ವಾಮಿ ಹಾಗೂ ಪುಷ್ಪರಾಜು ಒಳಗೊಂಡಂತೆ ಒಟ್ಟು 12 ಶಿಕ್ಷಕರಿಗೆ ಕ್ರಿಯಾಶೀಲ ಅತ್ಯುತ್ತಮ ಶಿಕ್ಷಕರು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ನೂತನ ನಿರ್ದೇಶಕರಿಗೆ ಹಾಗೂ 28 ಜನ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.