ಕಮಲಾಪುರದಲ್ಲಿ ನಿವೃತ್ತ ಯೋಧ ರವಿ ವೈದ್ಯ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಶಶಿಧರ ಮಾಕಾ, ಶಿವಕುಮಾರ ದೋಶೆಟ್ಟಿ, ಅಮೃತ ಗೌರೆ, ಬಸವರಾಜ ಮಠಪತಿ, ಪ್ರದೀಪ ಭಾಲ್ಕಿ, ನಾಗರಾಜ ಹುಣಸಿನಗಿಡ ಇತರರಿದ್ದರು. 
ಜಿಲ್ಲೆ

ದೇಶ ಸೇವೆಗೆ ಮುಂದಾಗಲಿ ಯುವಪೀಳಿಗೆ

ಕಮಲಾಪುರ: ಯುವ ಪೀಳಿಗೆ ದೇಶ ರಕ್ಷಣೆ ಮತ್ತು ಸೇವೆಗೆ ಮುಂದಾಗಬೇಕು. ರಾಷ್ಟ್ರ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ದೇಶಕ್ಕೆ ನಮ್ಮ ಕೊಡುಗೆ ಏನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಿವೃತ್ತ ಸಿಆರ್‌ಪಿಎಫ್ ಎಎಸ್‌ಐ ರವಿ ವೈದ್ಯ ಹೇಳಿದರು.

ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ೧೯೮೮ರಲ್ಲಿ ಕಾನ್‌ಸ್ಟೆಬಲ್ ಆಗಿ ಸಿಆರ್‌ಪಿಎಫ್‌ಗೆ ಸೇರಿದ ಬಳಿಕ ಹವಾಲ್ದಾರ, ಎಎಸ್‌ಐ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಬಿಹಾರ್, ಪಂಜಾಬ್, ಚೆನ್ನೈ, ಜಮ್ಮು ಕಾಶ್ಮೀರ, ಛತ್ತೀಸ್‌ಗಢ ಮೊದಲಾದ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಡಾ.ಅಂಬೇಡ್ಕರ್ ವೃತ್ತದಿಂದ ತೆರೆದ ವಾಹನದಲ್ಲಿ ರವಿ ವೈದ್ಯ ದಂಪತಿಯನ್ನು ಕೂರಿಸಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಪುಷ್ಪವೃಷ್ಟಿ ಮಾಡಲಾಯಿತು. ಭಾರತ ಮಾತಾಕಿ ಜೈ.. ಜೈ ಹಿಂದ್, ಜೈ ಜವಾನ್-ಜೈ ಕಿಸಾನ್ ಘೋಷಣೆಗಳು ಮೊಳಗಿದವು.
ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಶಶಿಧರ ಮಾಕಾ, ಪ್ರಮುಖರಾದ ಶಿವಕುಮಾರ ದೋಶೆಟ್ಟಿ, ಅಮೃತ ಗೌರೆ, ಬಸವರಾಜ ಮಠಪತಿ, ಬಸವರಾಜ ಚಿಕ್ಕೇಗೌಡ, ನಾಗರಾಜ ಹುಣಸಿನಗಿಡ, ಶರಣು ರಟಕಲ್, ಪ್ರಶಾಂತ ಮಾನಕರ, ಶಿವರಾಜ ಬೊಮ್ಮಣ್, ಪ್ರದೀಪ ಭಾಲ್ಕಿ, ನಟರಾಜ ಕಲ್ಯಾಣ, ಬಸವರಾಜ ಚಿಗ್ಗೋಣ ಇತರರಿದ್ದರು.