ಜಿಲ್ಲೆ

ದೇಶ ಸೇವೆಗೆ ಗೌರವ, ಸನ್ಮಾನ ಪ್ರೇರಣೆ

ಗೋಕರ್ಣ: ಇಂದು ದೇಶಾದ್ಯಂತ ಸೈನಿಕರಿಗೆ ನೀಡುತ್ತಿರುವ ಗೌರವ ಮತ್ತು ಸನ್ಮಾನಗಳು ದೇಶ ಸೇವೆಗೆ ಪ್ರೇರಣೆ ನೀಡುತ್ತವೆ ಎಂದು ನಿವೃತ್ತ ಯೋಧ ನರೇಂದ್ರ ಸುಬ್ಬು ಮಸಾಕಲ್ ಹೇಳಿದರು.

ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಅವರನ್ನು ದೇವರಬಾವಿ ಕೆಂಗಳಾ ಪರಮೇಶ್ವರಿ ಮಂದಿರದಲ್ಲಿ ಮಂಗಳವಾರ ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸೈನ್ಯದಲ್ಲಿನ ಅನುಭವವನ್ನು ಹಂಚಿಕೊಂಡ ಅವರು, ಜಮ್ಮು-ಕಾಶ್ಮೀರದಂತಹ ಪ್ರದೇಶದಲ್ಲಿ ಶೂನ್ಯ ತಾಪಮಾನದಲ್ಲಿ ಕಾರ್ಯ ನಿರ್ವಹಿಸಬೇಕಾದ ಸೈನಿಕ, ರಾಜಸ್ತಾನದಲ್ಲಿ 50 ಡಿಗ್ರಿಗೂ ಮೀರುವ ತಾಪಮಾನಕ್ಕೆ ಹೊಂದಿಕೊಳ್ಳಬೇಕು. ಇದರಿಂದಾಗಿ ವಿಶ್ವದಲ್ಲಿ ಭಾರತೀಯ ಸೈನಿಕ ಮಾತ್ರ ಎಂತಹ ಹವಾಮಾನ ವೈಪರೀತ್ಯದಲ್ಲೂ ಕಾರ್ಯ ನಿಭಾಯಿಸಬಲ್ಲ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ ಎಂದರು.

ಕೆಂಗಳಾ ಪರಮೇಶ್ವರಿ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಪ್ರದೀಪ ನಾಯಕ, ತೊರ್ಕೆ ಗ್ರಾಪಂ ಸದಸ್ಯ ಮಂಜುನಾಥ ನಾಯಕ, ನಾಗವೇಣಿ ಪಟಗಾರ, ಗ್ರಾಪಂ ಕಾರ್ಯದರ್ಶಿ ವಿನಾಯಕ ನಾಯ್ಕ, ನಿವೃತ್ತ ಶಿಕ್ಷಕ ನಾರಾಯಣ ಮಸಾಕಲ್, ತಿಮ್ಮಪ್ಪ ರಾಮ ಪಟಗಾರ, ಗೋಪಾಲ ಹೊಸ್ಕಟ್ಟ, ಚಂದ್ರಕಾಂತ ಮಸಾಕಲ್, ಸದಾ ಹೊಸ್ಕಟ್ಟ, ಸತೀಶ ಮಸಾಕಲ್, ಸಚಿನ್ ಹೊಸ್ಕಟ್ಟ ಉಪಸ್ಥಿತರಿದ್ದರು.</